ಕೋಲ್ಕತ್ತಾ: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಸರ್ಕಾರಿ ನೌಕರಿ ಸಿಕ್ಕಿದೆ ಎಂದು ಚಾಕು ಇರಿದ ಘಟನೆ ಪಶ್ಚಿಮ ಬಂಗಾಳದ ಪೂರ್ವ ಬುದ್ರ್ವಾನ್ ಜಿಲ್ಲೆಯಲ್ಲಿ ನಡೆದಿದೆ.

ಶೇರ್ ಶೇಖ್(26) ಆರೋಪಿ ಹಾಗೂ ರೇಣು ಖಾತುನ್ ದುರ್ಗಾಪುರ ಗಂಭೀರ ಗಾಯಗೊಂಡ ಮಹಿಳೆ. ಶೇರ್ ಶೇಖ್ ಜಿಲ್ಲೆಯ ಕೇತುಗ್ರಾಮ್ ಪ್ರದೇಶದ ಕೋಜಲ್ಸಾ ಗ್ರಾಮದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ. 2017ರ ಅಕ್ಟೋಬರ್‌ನಲ್ಲಿ ಶೇರ್ ಶೇಖ್ ಹಾಗೂ ರೇಣು ಖಾತುನ್ ವಿವಾಹವಾಗಿದ್ದರು.

ಇದಾದ ಬಳಿಕ ಮಾರನೇ ವರ್ಷವೇ ರೇಣು ಖಾತುನ್ ನರ್ಸಿಂಗ್ ಕೋರ್ಸ್ ಸೇರಿದ್ದಳು. ಈ ಕೋರ್ಸ್ ಮುಗಿದ ನಂತರ ಪಶ್ಚಿಮ ಬುದ್ರ್ವಾನ್‍ನ ದುರ್ಗಾಪುರದ ಖಾಸಗಿ ನರ್ಸಿಂಗ್ ಹೋಮ್‍ನಲ್ಲಿ ಕೆಲಸ ಮಾಡುತ್ತಿದ್ದರು.

ಇದಾದ ಬಳಿಕ ರೇಣು ತನ್ನ ಪತಿ ಶೇರ್ ಶೇಕ್ ಇಚ್ಛೆಗೆ ವಿರುದ್ಧವಾಗಿ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ರೇಣು ಖಾತುನ್‌ಗೆ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಸಿಕ್ಕಿತ್ತು. ಆದರೆ ಶೇರ್ ಶೇಖ್ ತನ್ನ ಪತ್ನಿಯನ್ನು ಬೇರೆ ಯಾವುದಾದರೂ ನಗರಕ್ಕೆ ವರ್ಗಾಯಿಸಬಹುದೆಂದು ಹೆದರಿದ್ದಾನೆ. ಇದಾದ ಬಳಿಕ ಪ್ರತಿನಿತ್ಯ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು.

ಈ ಹಿನ್ನೆಲೆಯಲ್ಲಿ ಕೋಪ ತಾರಕಕ್ಕೆ ಏರಿದ್ದು, ಶೇರ್ ಶೇಖ್ ತನ್ನ ಪತ್ನಿಯ ಕೈಯನ್ನೇ ಕತ್ತರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಗಂಭೀರ ಗಾಯಗೊಂಡ ರೇಣು ಖಾತುನ್ ಅವರನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗಾಗಿ ನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ರೇಣು ಖಾತುನ್ ಸಹೋದರ ಕೇತುಗ್ರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿ ಶೇರ್ ಶೇಖ್ ತಲೆಮರಿಸಿಕೊಂಡಿದ್ದಾನೆ.

By Suddi9

Leave a Reply

Your email address will not be published. Required fields are marked *