Published On: Thu, Jun 2nd, 2022

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿಟ್ಟೆ ಶಶಿಧರ ಶೆಟ್ಟಿ ನಿಧನ

ಮುಂಬಯಿ : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯ, ಅಖಿಲ ಭಾರತ ತುಳು ಒಕ್ಕೂಟದ ಗೌರವ ಪ್ರಧಾನ ಕಾರ್ಯದರ್ಶಿ, ಬಂಟರ ಮಾತೃಸಂಘದ ಮಾಜಿ ಕಾರ್ಯದರ್ಶಿ, ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಇದರ ದ.ಕ ಜಿಲ್ಲಾ ಧುರೀಣ, ತುಳು ಕೂಟ ಕುಡ್ಲ ಇದರ ಹಿರಿಯ ಸದಸ್ಯ, ಪದವಿನಂಗಡಿ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ, ಶಾರದಾ ಕ್ಯಾಟರರ್ಸ್ ಸಂಸ್ಥೆಗಳ ಮಾಲಕ, ಮಂಗಳೂರು ಪದವಿನಂಗಡಿ ನಿವಾಸಿ ಲ| ನಿಟ್ಟೆ ಶಶಿಧರ ಶೆಟ್ಟಿ (೬೬.) ಅಲ್ಪ ಕಾಲದ ಅಸೌಖ್ಯದಿಂದ ಜೂ.01ರಂದು ಬುಧವಾರ ಬೆಳಿಗ್ಗೆ ಮಂಗಳೂರು ಪದವಿನಂಗಡಿ ಅಲ್ಲಿರುವ ಸ್ವಗೃಹದಲ್ಲಿ ನಿಧನರಾದರು.Niitte Shashidha Shetty

ಶಶಿಧರ್ ಅವರೋರ್ವ ಅನನ್ಯ ತುಳು ಸಂಘಟಕರಾಗಿದ್ದು ಮೃತರು ಪತ್ನಿ, ಇಬ್ಬರು ಸುಪುತ್ರಿಯರನ್ನು ಅಗಲಿದ್ದಾರೆ. ಸುಪುತ್ರಿ ವಿದೇಶದಿಂದ ಆಗಮಿಸಬೇಕಾಗಿರುವುದರಿಂದ ಅಂತ್ಯಕ್ರಿಯೆ ಜೂನ್ ೪ ರಂದು ಜರಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.Niitte Shashidha Shetty (1)

ಗಣ್ಯರ ಸಂತಾಪ:
ಅಗಲಿದ ದಿವ್ಯಾತ್ಮಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಸದಸ್ಯ ಕಡಂದಲೆ ಸುರೇಶ್ ಭಂಡಾರಿ, ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಅ.ಭಾ.ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಬಂಟರ ಮಾತೃ ಸಂಘದ ತಾಲೂಕು ಸಮಿತಿ ಸಂಚಾಲಕ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಇಂಟರ್‌ನ್ಯಾಷನಲ್ ಬಂಟ್ಸ್ ವೇಲ್ಫ್ಪೇರ್ ಟ್ರಸ್ಟ್ ನ ಗೌರವಾಧ್ಯಕ್ಷ ಎ.ಸದಾನಂದ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ , ದಾಮೋದರ ನಿಸರ್ಗ , ಕದ್ರಿ ನವನೀತ ಶೆಟ್ಟಿ , ಮುಲ್ಕಿ ಕರುಣಾಕರ ಶೆಟ್ಟಿ, ದಿವಾಕರ ಎಸ್.ಶೆಟ್ಟಿ ಸಾಂಗ್ಲಿ, ತಾರಾನಾಥ ಶೆಟ್ಟಿ ಬೋಳಾರ, ಪ್ರದೀಪ್ ಆಳ್ವ ಕದ್ರಿ, ಲೀಲಾಕ್ಷ ಬಿ.ಕರ್ಕೇರ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ನೂರಾರು ಗಣ್ಯರು ತೀವ್ರ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಕೋರಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter