ಬಂಟ್ವಾಳ: ತಾಲ್ಲೂಕಿನ ಸಂಗಬೆಟ್ಟು ಶ್ರಿಂಗಾರಕಲ್ಲು ಶ್ರೀ ಬನಶಂಕರಿ ಜ್ಞಾನೋದಯ ಸಮಿತಿ ವತಿಯಿಂದ ಭಾನುವಾರ ನಡೆದ ೨೧ನೇ ವರ್ಷದ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ವಾಸುದೇವ ಶೆಟ್ಟಿಗಾರ್ ಮಾತನಾಡಿದರು.28btl-Siddakatte

ಇಲ್ಲಿನ ಸಿದ್ಧಕಟ್ಟೆ ಸಮೀಪದ ಶ್ರಿಂಗಾರಕಲ್ಲು ಶ್ರೀ ಬನಶಂಕರಿ ಜ್ಞಾನೋದಯ ಸಮಿತಿ ವತಿಯಿಂದ ಭಾನುವಾರ ನಡೆದ ೨೧ನೇ ವರ್ಷದ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ವಾಸುದೇವ ಶೆಟ್ಟಿಗಾರ್ ಮಾತನಾಡಿದರು.

ಸಂಗಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ಸುನಿಲ್ ಶೆಟ್ಟಿಗಾರ್ ಕಾರ್ಯಕ್ರವiದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಶಿಕ್ಷಕ ಪಿ. ಶಿವಾನ೦ದ ಭಂಡಾರಿ ಬೊಳ್ಳುಕಲ್ಲು, ಜ್ಞಾನೋದಯ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಎಕ್ಕೂರು, ಸದಸ್ಯರಾದ ತಾರಾನಾಥ, ಕರಿಯ ಪೂಜಾರಿ ಶುಭ ಹಾರೈಸಿದರು. ಇದೇ ವೇಳೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಶಿವಾನಂದ ಭಂಡಾರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಸುನಿಲ್ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು. ವಕೀಲ ಲಕ್ಷ್ಮೀನಾರಾಯಣ ಶೆಟ್ಟಿಗಾರ್, ದೇವಿಪ್ರಸಾದ್ ಶೆಟ್ಟಿಗಾರ್, ನಾರಾಯಣ ಆಚಾರ್ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *