ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಮೇ29ರಂದು ಶನಿವಾರ ಏರ್ಪಡಿಸಿದ್ದ ‘ತುಳುವ ಇತಿಹಾಸ ಶೋಧ , ವೀಕ್ಷಣೆ ಮತ್ತು ಅವಲೋಕನ’ ಕಾರ್ಯಕ್ರಮದಲ್ಲಿ ಫ್ರ‍್ರಾನ್ಸ್ ಸಂಶೋಧಕ ವಿನ್ಸೆಂಟ್ ಇವರನ್ನು ಅಭಿನಂದಿಸಲಾಯಿತು. ಪ್ರೊ.ಕೆ.ತುಕಾರಾಮ ಪೂಜಾರಿ, ಎಂ.ವಿವೇಕ ಆಳ್ವ ಮತ್ತಿತರರು ಇದ್ದರು.28btl-Sanchayagiri

ಸಂಶೋಧನೆ ಮತ್ತು ಮತ್ತು ಇತಿಹಾಸ ಪ್ರಜ್ಞೆ ಎಲ್ಲರಿಗೂ ಅಗತ್ಯವಾಗಿದ್ದು, ಸಂಕುಚಿತ ಮನೋಧರ್ಮ ಮತ್ತು ಅತಿ ಭಾವನಾತ್ಮಕತೆಯಿಂದ ಸತ್ಯ ಗೋಚರಿಸುತ್ತಿಲ್ಲ. ಇಂತಹ ಅಡೆತಡೆ ಬದಿಗೆ ಸರಿಸಿ ಶುದ್ಧ ಕಣ್ಣಿನಿಂದ ಸಮಾಜ ನೋಡಬೇಕು ಎಂದು ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಟ್ರಸ್ಟಿ ಎಂ.ವಿವೇಕ ಆಳ್ವ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡು ಸಮೀಪದ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ಮೂಡುಬಿದ್ರೆ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಸಹಭಾಗಿತ್ವದಲ್ಲಿ ಶನಿವಾರ ನಡೆದ ‘ತುಳುವ ಇತಿಹಾಸ ಶೋಧ , ವೀಕ್ಷಣೆ ಮತ್ತು ಅವಲೋಕನ ‘ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಫ್ರಾನ್ಸ್ ಸಂಶೋಧಕ ವಿನ್ಸೆಂಟ್ ಮಾತನಾಡಿ, ಫ್ರಾನ್ಸ್ ದೇಶದಲ್ಲಿ ಇತಿಹಾಸ ಬಿಂಬಿಸುವ ಮ್ಯೂಸಿಯಂಗೆ ಬಹಳ ಮಹತ್ವ ಇದೆ. ಬಂಟ್ವಾಳದ ತುಳು ವಸ್ತು ಸಂಗ್ರಹಾಲಯ ಕೂಡಾ ತುಳುನಾಡಿನ ಜನ ಜೀವನದ ಪ್ರತಿಬಿಂಬವಾಗಿದೆ ಎಂದರು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಕೆ.ತುಕಾರಾಮ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ವಿದ್ಯಾರ್ಥಿಗಳಾದ ಹೇಮಂತ್ ಕುಮಾರ್, ಸ್ಪರ್ಶ ಪಂಜಿಕಲ್ಲು ಇದ್ದರು. ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ ಕೈರೋಡಿ ಸ್ವಾಗತಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *