ಕೈಕಂಬ: ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ 2 ಕೋಟಿ ರೂಪಾಯಿ ಅನುದಾನದಲ್ಲಿ ಮರುನಿರ್ಮಾಣಗೊಳ್ಳಲಿರುವ ಬಜ್ಪೆ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾ.ಪಂ.ಸದಸ್ಯ ಜೋಕಿಮ್ ಡಿ ಕಾಸ್ಟಾ, ಸುಧಾಕರ ಕಾಮತ್, ರಿತೇಶ್ ಶೆಟ್ಟಿ, ಮಾಜಿ ಸದಸ್ಯ ಲೋಕೇಶ್ ಪೂಜಾರಿ, ವಿಜಯ ಪೂಜಾರಿ, ಆರ್.ಕೆ ರಾಜೇಶ್ ಅಮೀನ್, ಮರವೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ , ಸಂತೋಷ್ ಡಿಸೋಜ, ರಾಘವ ಪಡೀಲ್ ಪ್ರಬಾರ ಪೊಲೀಸ್ ನಿರೀಕ್ಷಕರು, ಎ ಎಸ್ ಐ ರಾಮ ಪೂಜಾರಿ, ಪಿ ಎಸ್ ಐ ಗಳಾದ ಪೂವಪ್ಪ, ಗುರುವಪ್ಪ, ಕಾಂತಿ, ಕಮಲ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

