ಬಂಟ್ವಾಳ: ಮಂಗಳೂರು ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇ.೭ರಂದು ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟರ್ ಸವಾರ ಇಲ್ಲಿನ ಬಿ.ಸಿ.ರೋಡು ನಿವಾಸಿ ಕೆ.ಎನ್.ರಮೇಶ್ (೬೭) ಇವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಮೇ.22ರಂದು ಭಾನುವಾರ ನಡೆದಿದೆ. ಉಡುಪಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದಲ್ಲಿ ಜಿಲ್ಲಾ ಲೆಕ್ಕಪತ್ರಪರಿಶೋಧಕರಾಗಿ ನಿವೃತ್ತರಾಗಿದ್ದ ಇವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ.
