ಪೊಳಲಿ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳ ಬೋಧನೆ ಇತ್ತೀಚಿನ ದಿನಗಳಲ್ಲಿ ಅವಶ್ಯಕವಾಗಿರುತ್ತದೆ ಎಂದು ಸರಕಾರಿ ಪ್ರೌಢಶಾಲೆಗಳಲ್ಲಿ ಇಲ್ಲಿ ನಡೆದ ಶೈಕ್ಷಣಿಕ ವರ್ಷ 2022 23ರ ಪೋಷಕರ ಸಭೆಯಲ್ಲಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು ಮುಖ್ಯ ಶಿಕ್ಷಕರಾದ ಶ್ರೀ ರಾಧಾಕೃಷ್ಣ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು ಸರಕಾರಿ ಶಾಲೆ ಯಾವುದೇ ಶಾಲೆಗೆ ಕಡಿಮೆ ಇಲ್ಲ ಎಲ್ಲಾ ಮೂಲಭೂತ ಸೌಕರ್ಯಗಳು ಈ ಶಾಲೆಯಲ್ಲಿ ಲಭ್ಯವಿದೆ ಎಂದು ಎಸ್ಡಿಎಂಸಿ ಸದಸ್ಯರಾದ ಯಶವಂತ ಪೊಳಲಿ ಹೇಳಿದರು.
2022 23 ನೇ ಸಾಲಿನಲ್ಲಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಉತ್ತಮ ಸಾಧನೆ ಗೈದ ಆಂಗ್ಲಮಾಧ್ಯಮದ ವಿದ್ಯಾರ್ಥಿಗಳಾದ ಸಮ್ಯ ತ ಆಚಾರ್, ವೈಷ್ಣವಿ ಮತ್ತು ಕಾರ್ತಿಕ್ ಆಂಗ್ಲಮಾಧ್ಯಮದ ಪ್ರೀತಿ ಮಧುಶ್ರೀ ಮತ್ತು ರೋಷನ್ ಅವರನ್ನು ಅಭಿನಂದಿಸಲಾಯಿತು ಹೆತ್ತವರಿಗೂ ಹೆತ್ತವರಿಗೂ ಪುಷ್ಪ ನೀಡಿ ಗೌರವಿಸಲಾಯಿತು. ಅಲ್ಲಿ ಶಾಲಾ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.
ಈ ದಿನದ ಮುಖ್ಯ ದಿಕ್ಸೂಚಿ ಭಾಷಣಕಾರರಾಗಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಉಪನಸ್ಯಕರಾದ Dr.ಕುಮಾರಸ್ವಾಮಿ ಆಗಮಿಸಿದ್ದರು. ಹೆತ್ತವರು ಮಕ್ಕಳೊಂದಿಗೆ ಮುಕ್ತಮನಸ್ಸಿನಿಂದ ಮಾತನಾಡಿದಾಗ ಇಬ್ಬರ ಅಂತರ ಕಡಿಮೆಯಾಗುತದೆ.
ಶಿಕ್ಷಕಿಯಾದ ಶ್ರೀಮತಿ ಮರ್ಲಿನ್ ಪೈಸ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀಮತಿ ಜಾನಟ್ ಲೋಬೊ ಸ್ವಾಗತಿಸಿ ಶ್ರೀಮತಿ ಮಂಜುಳ ಕುಮಾರಿ ಧನ್ಯವಾದ ಸಮರ್ಪಿಸಿದರು. ಸಭೆಯಲ್ಲಿ ಶಿಕ್ಷಕರಾದ ರಂಜಿತ ಪೂರ್ಣಿಮಾ ,ವಸಂತಿ ಉಮಾ ಪೌಲಿ ,ಮುರುಳಿದರ ಜಯಂತ್,ಮತ್ತು ಹೇಮಲತಾ ಉಪಸ್ಥಿತರಿದ್ದರು.
