೩ ಸರ್ಕಾರಿ ಮತ್ತು ೮ ಖಾಸಗಿ ಪ್ರೌಢಶಾಲೆಗೆ ಶೇ ೧೦೦ ಫಲಿತಾಂಶ
ಬಂಟ್ವಾಳ: ತಾಲ್ಲೂಕಿನಲ್ಲಿ ಎಸ್‌ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಖಾಸಗಿ ಶಾಲೆಗೆ ನಾವೇನೂ ಕಡಿಮೆ ಇಲ್ಲ ಎಂಬಂತೆ ಮೂರು ಸರ್ಕಾರಿ ಪ್ರೌಢಶಾಲೆ ಶೇ.೧೦೦ ಫಲಿತಾಂಶ ದಾಖಲಿಸುವ ಮೂಲಕ ಈ ಬಾರಿ ಗಮನ ಸೆಳೆದಿದೆ. ಇಲ್ಲಿವ ವಗ್ಗ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಗ್ಗ ಕಾವಳಪಡೂರು ಸರ್ಕಾರಿ ಪ್ರೌಢಶಾಲೆ ಮತ್ತು ನೈನಾಡು ಸರ್ಕಾರಿ ಪ್ರೌಢಶಾಲೆ ಶೇ.೧೦೦ ಫಲಿತಾಂಶ ದಾಖಲಿಸಿದೆ.
ಉಳಿದಂತೆ ಬಂಟ್ವಾಳ ವಿದ್ಯಾಗಿರಿ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಅರಳ ಓಂ ಶ್ರೀ ಜನಹಿತಾಯ ಖಾಸಗಿ ಪ್ರೌಢಶಾಲೆ, ಲೊರೆಟ್ಟೋ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಅಳಿಕೆ ಸತ್ಯಸಾಯಿ ಪ್ರೌಢಶಾಲೆ, ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆ ಹೀಗೆ ಒಟ್ಟು ೮ ಖಾಸಗಿ ಪ್ರೌಢಶಾಲೆ ಶೇ.೧೦೦ ಫಲಿತಾಶಂ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಇಲ್ಲಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿನಿ ಪ್ರಾಪ್ತಿ ಗಾಣಿಗ ಇವರು ೬೧೬ ಅಂಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.