ಮಂಗಳೂರು: ಮಂಗಳೂರು ಬ್ರೇಕಿಂಗ್ ನ್ಯೂಸ್, ಪ್ಲಾಶ್ ನ್ಯೂಸ್, ಕಾರ್ಯಕ್ರಮಗಳು, ಸುದ್ದಿಗಳು, ವಿಶೇಷ ವರದಿ ಹೀಗೆ ಬ್ಯೂರೂಗಳಲ್ಲಿ, ಡೆಸ್ಕ್‌ನಲ್ಲಿ ಸದಾ ಬ್ಯುಸಿ‌ ಆಗಿರುವ ಪತ್ರಕರ್ತರು ಇಂದು ತಮ್ಮೆಲ್ಲಾ ಬ್ಯುಸಿ ಶೆಡ್ಯೂಲ್‌‌ಗೆ ಬಿಡುವು ನೀಡಿ ದಿನಪೂರ್ತಿ ನಕ್ಕು ನಲಿದರು. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸಿಸುವ ಪತ್ರಕರ್ತರಿಗೆ ಒಂದಿಷ್ಟು ರಿಲ್ಯಾಕ್ಸ್, ರಿಪ್ರೆಶ್‌ಮೆಂಟ್ ನೀಡಬೇಕು ಎಂಬ ದೃಷ್ಠಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗೆ ಒಂದು ದಿನದ ಮಿನಿ ಪ್ರವಾಸ ಏರ್ಪಡಿಸಲಾಗಿತ್ತು.WhatsApp Image 2022-05-18 at 12.13.58 PM

ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಮತ್ತು ಕುಟುಂಬ ವರ್ಗಕ್ಕೆ ಮಂಗಳೂರು ನಗರದ ಹೊರ ವಲಯದ ಪಿಲಿಕುಳದ ಮಾನಸ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಒಂದು ಪ್ರವಾಸ ಏರ್ಪಡಿಸಲಾಗಿತ್ತು. 80 ಕ್ಕೂ ಹೆಚ್ಚು ಮಂದಿ ಪತ್ರಕರ್ತರು ಮತ್ತು ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಸದಾ ಬಿಸಿಯಾಗಿರುವ ಪತ್ರಕರ್ತರು ಎಲ್ಲಾ ಒತ್ತಡವನ್ನೂ ಮರೆತು ‘ಅಮ್ಯೂಸ್‌ಮೆಂಟ್‌ ಪಾರ್ಕ್‌ನ ಟ್ಯಾಗ್ ಲೈನ್ ಹೇಳುವಂತೆ ಪ್ರವಾಸವನ್ನು ಕೂಲಾಗಿ ಸವಿದರು. ಅಮ್ಯೂಸ್‌ಮೆಂಟ್ ಪಾರ್ಕ್‌ನ ಕೊಳದ ನೀರಿನಲ್ಲಿ ಮಿಂದೆದ್ದರು. ನಕ್ಕು ನಲಿದರು. ಹಾಡು ಹೇಳಿ, ಡಾನ್ಸ್ ಮಾಡಿ ಸಂಭ್ರಮಿಸಿದರು. ಸುಮಾರು 14 ಎಕ್ರೆ ವಿಶಾಲ ಪ್ರದೇಶದಲ್ಲಿ ಹರಡಿರುವ ಪಾರ್ಕ್‌ ಪೂರ್ತಿ ಓಡಾಡಿದರು. ಜೊತೆಗೆ ನಾಲಗೆಗೆ ರುಚಿಕರವಾದ ಆಹಾರವನ್ನೂ ಸವಿದರು. ಕುಟುಂಬದ ಸದಸ್ಯರ ಜೊತೆ, ಸಹೋದ್ಯೋಗಿಗಳ ಜೊತೆ ಸಂತಸದಿಂದ‌ ಸಮ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆದ ಪ್ರವಾಸ ಬಲು ಬೇಗನೇ ಮುಗಿದಂತೆ ಭಾಸವಾಯಿತು ಎಂದು ಕೆಲವು ಪತ್ರಕರ್ತರು ಅಭಿಪ್ರಾಯಪಟ್ಟರು.WhatsApp Image 2022-05-18 at 12.13.58 PM (1)

ಹಲವು ಮಂದಿ ಪತ್ರಕರ್ತರು ತಮ್ಮೆಲ್ಲಾ ಒತ್ತಡವನ್ನು ಮರೆತು ಪ್ರವಾಸ ಸವಿದರೆ, ಹಲವರಿಗೆ ಕೆಲಸದ ಒತ್ತಡದಿಂದ ಪ್ರವಾಸ‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ..

ಪತ್ರಕರ್ತರಿಗೆ ಈ ರೀತಿಯ ರಿಪ್ರೆಶ್‌ಮೆಂಟ್ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳುವ ಯೋಚನೆ ಇದೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಪಿಲಿಕುಳ ನಿಸರ್ಗಧಾಮದ ಅಧ್ಯಕ್ಷ ವಿಲ್ಫ್ರೆಡ್, ಆಡಳಿತ ನಿರ್ದೇಶಕ ಜಯೇಶ್ ಅಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾರ್ಕೇಟಿಂಗ್ ಮ್ಯಾನೇಜರ್ ಅರುಣ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್, ಕಾರ್ಯದರ್ಶಿ ವಿಜಯ್ ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಹಮ್ಮದ್ ಆರಿಫ್ ಪಡುಬಿದ್ರೆ, ಸತ್ಯವತಿ, ಶ್ರವಣ್‌ಕುಮಾರ್ ನಾಳ, ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ನಾಗರಾಜ್, ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಯ್ಲ, ಕಾರ್ಯದರ್ಶಿ ವಿಜಯಕುಮಾರ್, ಬಂಟ್ವಾಳ ಪತ್ರಕರ್ತರ ಸಂಘದ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *