ಕೊಯಿಲ ‘ಶಾಲಾ ಪ್ರಾರಂಭೋತ್ಸವ ಮತ್ತು ಕಲಿಕಾ ಚೇತರಿಕೆ ಬಗ್ಗೆ ಮಾಹಿತಿ’ ಕಾರ್ಯಕ್ರಮ
ಬಂಟ್ವಾಳ: ತಾಲ್ಲೂಕಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಮೇ.16ರಂದು ಸೋಮವಾರ ನಡೆದ ‘ಶಾಲಾ ಪ್ರಾರಂಭೋತ್ಸವ ಮತ್ತು ಕಲಿಕಾ ಚೇತರಿಕೆ ಬಗ್ಗೆ ಮಾಹಿತಿ’ ಕಾರ್ಯಕ್ರಮಕ್ಕೆ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು ಚಾಲನೆ ನೀಡಿದರು. ಮುಖ್ಯಶಿಕ್ಷಕ ಸಿಪ್ರಿಯಾನ್ ಡಿಸೋಜ, ನಿವೃತ್ತ ಮುಖ್ಯಶಿಕ್ಷಕ ನಾರಾಯಣ ನಾಯಕ್ ಕರ್ಪೆ, ಉಮೇಶ ಡಿ.ಎಂ.ಅರಳ, ರಮೇಶ ಮಯ್ಯ, ಜನಾರ್ದನ ಮತ್ತಿತರರು ಇದ್ದರು.