ವಾಮದಪದವು: ಶಿಕ್ಷಕಿ ಶಾಹಿದಾ ಬಾನು ಇವರಿಗೆ ವಿ.ವಿ.೨ನೇ ರ‍್ಯಾಂಕ್
ಬoಟ್ವಾಳ: ಇಲ್ಲಿನ ವಾಮದಪದವು ನಿವಾಸಿ, ಮೂಡುಪಡುಕೋಡಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕಿ ಶಾಹಿದಾ ಬಾನು ಇವರಿಗೆ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂ.ಎ.ಇತಿಹಾಸ ವಿಭಾಗದಲ್ಲಿ ೨ನೇ ರ‍್ಯಾಂಕ್ ಗಳಿಸಿದ್ದಾರೆ. ಈ ವಿಶ್ವವಿದ್ಯಾನಿಲಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಹಿಳಾ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದಾರೆ.
ಬೆಳುವಾಯಿ ಗ್ರಾಮದ ದಿವಂಗತ ಅಮೀರ್ ಖಾನ್ ಮತ್ತು ದಿಲ್ಶಾದ್ ದಂಪತಿ ಪುತ್ರಿಯಾಗಿರುವ ಇವರು ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆ ಹಿಂದಿ ಶಿಕ್ಷಕ ಇಮ್ತಿಯಾಜ್ ಇವರ ಪತ್ನಿ.