ಬಂಟ್ವಾಳ: ಬಿ.ಸಿ.ರೋಡು ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ.ವಿಶ್ವನಾಥ್ ಅವರು ಆಯ್ಕೆಯಾಗಿದ್ದಾರೆ. ದೇವಸ್ಥಾನದ ಸಭಾಭವನದಲ್ಲಿ ಸಮಿತಿಯ ಅಧ್ಯಕ್ಷ ರಾಜೇಶ್ ಎಲ್.ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಗಿದೆ.
ಉಳಿದಂತೆ ಪದಾಧಿಕಾರಗಳಾಗಿ ಸಂಜೀವ ಪೂಜಾರಿ ಉಪಾಧ್ಯಕ್ಷ, ಶಿವಶಂಕರ್ ನಂದಾವರ ಕಾರ್ಯದರ್ಶಿ, ಮೋಹನ್ .ಬಿ ಕೋಶಾಧಿಕಾರಿ, ರಮೇಶ್ ಸಾಲಿಯಾನ್ ಜತೆಕಾರ್ಯದರ್ಶಿ ಅವರು ಆಯ್ಕೆಗೊಂಡಿದ್ದಾರೆ. ಹಾಗೆಯೇ 9 ಮಂದಿ ಸಮಿತಿ ಸದಸದಯರನ್ನಾಗಿ ಆಯ್ಕೆಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
