ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ಅಕ್ಟೋಬರ್ ೨೦೨೧ರಲ್ಲಿ ನಡೆಸಿದ ಎಂ.ಕಾಂ. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ವಿದ್ಯಾರ್ಥಿಗಳು ೮ ಮತ್ತು ೧೦ನೇ ರ‍್ಯಾಂಕ್‌ಗಳನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಮೇಘಶ್ರೀ 8.2(CGPA) ಅಂಕಗಳನ್ನು ಗಳಿಸಿ ಎಂಟನೇ ರ‍್ಯಾಂಕ್ ಗಳಿಸಿದರೆ, ನೇಹಾ ಆರ್ ಮೊಡಂಕಾಪು 8.13(CGPA) ಅಂಕಗಳನ್ನು ಪಡೆದು ಹತ್ತನೇ ರ‍್ಯಾಂಕ್ ಗಳಿಸಿರುತ್ತಾರೆ.Untitled-1

ಮಂಗಳೂರು ವಿಶ್ವವಿದ್ಯಾನಿಲಯದ ೨೦೨೦-೨೧ ನೇ ಸಾಲಿನಲ್ಲಿ ನಡೆದ ಪದವಿ ಪರೀಕ್ಷೆಯಲ್ಲಿ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ವಿದ್ಯಾರ್ಥಿಗಳು ೭ ಮತ್ತು ೮ ನೇ ರ‍್ಯಾಂಕ್‌ಗಳನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಅಮೃತವರ್ಷಿಣಿ ಶೆಟ್ಟಿ ಬಿ.ಎಸ್ಸಿ ಯಲ್ಲಿ ೯೫.೮೩% ಅಂಕಗಳನ್ನು ಗಳಿಸಿ ೭ನೇ ರ‍್ಯಾಂಕ್, ವರ್ಷ ಶೆಣೈ ಕೆ ಬಿ.ಕಾಂ ನಲ್ಲಿ ೯೩.೮೮% ಅಂಕಗಳೊಂದಿಗೆ ೮ನೇ ರ‍್ಯಾಂಕ್, ಹಾಗೂ ಎಸ್. ರಕ್ಷಾ ಬಿ.ಸಿ.ಎ ಯಲ್ಲಿ ೯೪.೫೪% ಅಂಕಗಳೊಂದಿಗೆ ೮ನೇ ರ‍್ಯಾಂಕ್ ಗಳಿಸಿರುತ್ತಾರೆ.

ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ಬಡ ಮಕ್ಕಳಿಗೆ ನೀಡುತ್ತಿರುವ ಸಂಸ್ಥೆಯ ಕೀರ್ತಿಯನ್ನು ಈ ವಿಶಿಷ್ಟ ಸಾಧನೆಯೊಂದಿಗೆ ಮೇಲೆರಿಸಿದಂತಹ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಕೂಡಿಗೆ ರಘನಾಥ ಶೆಣೈ, ಕಾಲೇಜಿನ ಸಂಚಾಲಕರಾದ ಶ್ರೀ ಕೂಡಿಗೆ ಪ್ರಕಾಶ್ ಶೆಣೈ, ಪ್ರಾಂಶುಪಾಲರು, ಹಾಗೂ ಅಧ್ಯಾಪಕ ವರ್ಗದವರು ಅಭಿನಂದಿಸಿದ್ದಾರೆ

By suddi9

Leave a Reply

Your email address will not be published. Required fields are marked *