ಬಂಟ್ವಾಳ: ಕಳೆದ ೧೯೭೨ರಲ್ಲಿ ಆರಂಭಗೊಂಡ ಇಲ್ಲಿನ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ೫೦ರ ಹರೆಯದ ಸಂಭ್ರಮದಲ್ಲಿದ್ದು, ಇದೇ ೨೬ರಂದು ಸಂಜೆ ೬ ಗಂಟೆಗೆ ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ‘ಸುವರ್ಣ ಮಹೋತ್ಸವ ಸಂಭ್ರಮ’ ಕಾರ್ಯಕ್ರಮಕ್ಕೆ ಚಾಲನೆ ಮತ್ತು ಲಾಂಛನ ಬಿಡುಗಡೆಗೊಳಿಸಲಾಗುವುದು ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವರ್ಷವಿಡೀ ನಡೆಯುವ ಈ ಸಂಭ್ರಮಾಚರಣೆ ಅರ್ಥಪೂರ್ಣಗೊಳಿಸಲು ರೂ ೩೫ ಲಕ್ಷ ವೆಚ್ಚದಲ್ಲಿ ವಿವಿಧ ಸಾಮಾಜಿಕ ಸೇವಾ ಚಟುವಟಿಕೆ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.

ಇಲ್ಲಿನ ಹಿರಿಯ ವೈದ್ಯ ಡಾ.ಬಿ.ವಸಂತ ಬಾಳಿಗಾ ಸ್ಥಾಪಕಾಧ್ಯಕ್ಷತೆಯಲ್ಲಿ ಆರಂಭಗೊಂಡ ಕ್ಲಬ್ ಈಗಾಗಲೇ ಸರ್ಕಾರಿ ಆಸ್ಪತ್ರೆಗೆ ಶೈತ್ಯಾಗಾರ, ಡಯಾಲಿಸಿಸ್ ಯಂತ್ರ, ಐಸಿಯು ಬೆಡ್ ಹಸ್ತಾಂತರಿಸಿದ್ದು, ಬಸ್ ನಿಲ್ದಾಣ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ, ಪಿಸಿಯೋಥೆರಪಿ ಕೇಂದ್ರ, ಸೇತುವೆ ರಚನೆ ಲಯನ್ಸ್ ಸೇವಾ ಮಂದಿರ ನಿರ್ಮಿಸಿದೆ. ಮುಂದಿನ ದಿನಗಳಲ್ಲಿ ಇಬ್ಬರು ಅಶಕ್ತ ಮಹಿಳೆಯರಿಗೆ ಮನೆ ನಿರ್ಮಾಣ, ವಿಶೇಷ ಚೈತನ್ಯ ಮಕ್ಕಳಿಗೆ ಶಾಲೆ, ‘ನಮ್ಮ ಮರ, ನಮ್ಮ ಉಸಿರು’ ವೃಕ್ಷ ಅಭಿಯಾನ ಮುಂದುವರಿಕೆ, ಮಕ್ಕಳ ಪಾಕ್ ð ಪುನರ್ ನಿರ್ಮಾಣ ಮತ್ತಿತರ ಸಮಾಜಮುಖಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು.

ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಮಾತನಾಡಿ, ೪ ಕಂದಾಯ ಜಿಲ್ಲೆ ಹೊಂದಿರುವ ಲಯನ್ಸ್ ಕ್ಲಬ್ ವತಿಯಿಂದ ರೂ ೨.೫ ಕೋಟಿ ವೆಚ್ಚದಲ್ಲಿ ಮಂಗಳೂರು ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಗೆ ಮೂಲಭೂತ ಸೌಕರ್ಯ ಒದಗಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಮಧ್ವರಾಜ್ ಬಿ.ಕಲ್ಮಾಡಿ, ಕೋಶಾಧಿಕಾರಿ ಜಯಂತ ಶೆಟ್ಟಿ, ಸಂಯೋಜಕ ಪಿ.ಶಿವಾನಂದ ಬಾಳಿಗಾ, ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ಉಮೇಶ ಆಚಾರ್ಯ ಇದ್ದರು.

By Suddi9

Leave a Reply

Your email address will not be published. Required fields are marked *