ಮುಂಬಯಿ : ಬಂಟ್ವಾಳ ತಾಲೂಕು ನಾವೂರು ಇಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಸಾರಥ್ಯ ಹಾಗೂ ಕಾಂಗ್ರೇಸ್ ನೇತಾರ ಪಿಯೂಸ್ ಎಲ್.ರೋಡ್ರಿಗಸ್ ನೇತೃತ್ವದಲ್ಲಿ ೧೧ನೇ ವಾರ್ಷಿಕ ಬಂಟ್ವಾಳ ಕಂಬಳ ಪ್ರಸಿದ್ಧಿಯ ಮೂಡೂರು ಪಡೂರು ನಾಮಾಂಕಿತ ಕಂಬಳವು ಇಂದಿಲ್ಲಿ ಭಾನುವಾರ ಅದ್ದೂರಿಯಾಗಿ ಆರಂಭ ಗೊಂಡಿತು.IMG-20220417-WA0159 IMG-20220417-WA0165

ಈ ಅಮಗಿನ ಕೊನೆಯ ಕಂಬಳ ಎಂದೆಣಿಸಿದ ಕಂಬಳದ ಅಧ್ಯಕ್ಷತೆಯನ್ನು ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದು, ಸೊಲೂರು ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಶಂಸನೆಗೈದರು.IMG-20220417-WA0164  IMG-20220417-WA0163

ಶ್ರೀ ಕ್ಷೇತ್ರ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಭಾವೈಕ್ಯಕ್ಕೆ ಕಂಬಳ ಮುನ್ನುಡಿಯಾಗಲಿ ಎಂದು ಆಶಿಸಿದರು.IMG-20220417-WA0162

ಸಂತ ಅಂತೊನಿ ಚರ್ಚ್ ಅಲ್ಲಿಪಾದೆ ಇದರ ಧರ್ಮಗುರು ರೆ| ಫಾ| ಫೆಡ್ರಿಕ್ ಮೊಂತೆರೋ, ನಿವೃತ್ತ ತಹಸೀಲ್ದಾರ್ ಮೋಹನ ರಾವ್, ನಾವೂರು ಗ್ರಾ.ಪಂ ಅಧ್ಯಕ್ಷ ಉಮೇಶ್ ಕುಲಾಲ್, ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಮಾಜಿ ಶಾಸಕ ಜೆ.ಆರ್.ಲೋಬೊ, ಪತ್ರಕರ್ತ ವಾಲ್ಟರ್ ನಂದಳಿಕೆ, ಕಾರ್ಯನಿರತ ಪತ್ರಕರ್ತರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ನಾವೂರು ಗ್ರಾ.ಪಂ ಉಪಾಧ್ಯಕ್ಷೆ ಲವೀನಾ ವಿಲ್ಮಾ ಮೋರಸ್ ಅತಿಥಿ ಅಭ್ಯಾಗತರಾಗಿ ಉಪಸ್ಥಿತರಿದ್ದರು.IMG-20220417-WA0161  IMG-20220417-WA0160

ಕಂಬಳ ಸಮಿತಿ ಸಂಚಾಲಕ ಪದ್ಮಶೇಖರ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲಿಯಾನ್, ಬೇಬಿ ಕುಂದರ್, ಅವಿಲ್ ಮಿನೇಜಸ್, ಸುದರ್ಶನ್ ಜೈನ್, ಅಬ್ಬಾಸ್ ಆಲಿ ಡೆನ್ಝಿಲ್ ನೊರೊನ್ಹ, ಶಬೀರ್, ಫಿಲಿಪ್ ಫ್ರಾಂಕ್ ಆಗ್ರಾರ್ ಮತ್ತಿತರರು ಪ್ರಮುಖರಾಗಿದ್ದು ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಮತ್ತು ರಾಜೀವ ಕಕ್ಯಪದವು ಕಾರ್ಯಕ್ರಮ ನಿರ್ವಹಿಸಿದರು.IMG-20220417-WA0166

By Suddi9

Leave a Reply

Your email address will not be published. Required fields are marked *