ಪಡುಬಿದ್ರಿ: ಪತ್ನಿ ಇದ್ದು ಹರೆಯಕ್ಕೆ ಬಂದಿರುವ ಮೂರು ಹೆಣ್ಣು ಮಕ್ಕಳ ತಂದೆಯಾಗಿರುವ ಪಡುಬಿದ್ರಿ ಗ್ರಾ.ಪಂ. ಸದಸ್ಯನಿಂದಾಗಿ ತನ್ನ ಸಂಸಾರವನ್ನು ಕಳೆದುಕೊಂಡ ಯುವಕನೋರ್ವ ತನ್ನ ನೋವನ್ನು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾದ್ಯಮಗಳ ಮುಂದೆ ತೋಡಿಕೊಂಡಿದ್ದಾರೆ.
ಪಡುಬಿದ್ರಿಯ ದೀನ್ ಸ್ಟೀನ್ ನಿವಾಸಿಯಾಗಿರುವ ನಾನು ಮೊಹಮ್ಮದ್ ಇಲ್ಯಾಸ್, ನನಗೆ ಜೀನತ್ ಎಂಬಾಕೆಯೊಂದಿಗೆ 2018ರಲ್ಲಿ ಮದುವೆಯಾಗಿತ್ತು ನಮಗೆ ಒರ್ವ ಪುತ್ರನಿದ್ದಾನೆ. ಚೆನ್ನಾಗಿಯೇ ಇದ್ದ ನಮ್ಮ ಸಂಸಾರಕ್ಕೆ ಈ ಹೆಣ್ಣುಬಾಕ ಕಲಂದರ್ ಶಫಿಯ ಕಣ್ಣು ಬಿದ್ದಿದ್ದು, ಪತ್ನಿಯನ್ನು ಪುಸಲಾಯಿಸಿ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ.
ನಾವು ಒಪ್ಪದ ಠಾಣೆಯ ಮುಂಭಾಗ ಪ್ರತಿಭಟಿಸಿದಾಗ ಅನಿರ್ವಾಯವಾಗಿ ಆಕೆಯನ್ನು ರಿಮೇಂಡ್ ಹೋಂಗೆ ಕಳುಹಿಸಿದ್ದಾರೆ. ಇದೀಗ ಸತ್ಯ ಬಯಲಾಗಿದ್ದು ಶಫಿ, ಜೀನತ್ ಸಹಿತ ಪೊಲೀಸರ ಜಂಟಿ ನಾಟಕಕ್ಕೆ ತೆರೆ ಬಿದ್ದಿದೆ. ಕಾರಣ ಜೀನತ್ ನಾಪತ್ತೆಯಾದ ದಿನದಲ್ಲೇ ಶಫಿ-ಜೀನತ್ ತೆಗೆದ ಸೆಲ್ಫಿ ಪೋಟೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾಗಿದೆ .ಆಕೆ ಶಫಿಯೊಂದಿಗೆ ಹೋಗಿದ್ದಾಳೆ ಎಂಬುದಕ್ಕೆ ಇದೀಗ ದಾಖಲೆ ದೊರಕಿದೆಯಲ್ಲ ಪಡುಬಿದ್ರಿ ಪೋಲಿಸರು ಮುಂದೆನು ಕ್ರಮ ಕೈಗೊಳ್ಳುತ್ತಾರೆ ನೋಡ ಬೇಕಾಗಿದ್ದು, ಈ ಬಗ್ಗೆ ಜಿಲ್ಲಾ ಎಸ್ಪಿಯವರಿಗೂ ದೂರು ನೀಡುವುದಾಗಿ ಇಲ್ಯಾಸ್ ತಿಳಿಸಿದ್ದಾರೆ. ಸುದ್ಧಿಗೋಪ್ಠಿಯಲ್ಲಿ ಉಪಸ್ಥಿತರಿದ್ದ ಇಲ್ಯಾಸ್ ಸಹೋದರಿ ಜೀನತ್ ಕೂಡಾ ತನ್ನ ತಮ್ಮನ ಸಂಸಾರದ ಮೇಲೆ ಸವಾರಿ ಮಾಡಿದ ಶಫಿ ವಿರುದ್ಧ ಕಿಡಿಕಾರಿದ್ದಾರೆ.

