ಬಂಟ್ವಾಳ: ತಾಲ್ಲೂಕಿನ ಸರಪಾಡಿ ಎಂಬಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಪ್ರಸಿದ್ಧ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಕಾಷ್ಠಶಿಲ್ಪ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು.15btl-Sarapady

ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಮತ್ತು ಅರ್ಚಕ ಜಯರಾಮ ಕಾರಂತ ವಿವಿಧ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಕಾಷ್ಠಶಿಲ್ಪಿ ಹರೀಶ ಎಂ.ಸಿ.ಇವರಿಗೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ ಮತ್ತು ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಕಾಮಗಾರಿ ವೀಳ್ಯ ನೀಡಿದರು.

ಆರ್ಥಿಕ ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಕೋಶಾಧಿಕಾರಿ ಅರುಣ್ ಐತಾಳ್, ಆಡಳಿತ ಸಮಿತಿ ಅಧ್ಯಕ್ಷ ವಿಠಲ ಎಂ.ಆರುಮುಡಿ, ಕಾರ್ಯದರ್ಶಿ ಉಮೇಶ ಆಳ್ವ ಕೊಟ್ಟುಂಜ, ಪ್ರಮುಖರಾದ ಗಿರಿಧರ ಮಠದಬೆಟ್ಟು, ಸುರೇಂದ್ರ ಪೈ, ಕುಸುಮಾಕರ ಶೆಟ್ಟಿ, ರಾಧಾಕೃಷ್ಣ ರೈ, ರಾಮಣ್ಣ ಶೆಟ್ಟಿ, ಸಂತೋಷ್ ಶೆಟ್ಟಿ, ಪ್ರಕಾಶ್ಚಂದ್ರ ಆಳ್ವ, ಸುಂದರ ಶೆಟ್ಟಿ, ಪದ್ಮಪ್ಪ ಪೂಜಾರಿ, ಸತೀಶ ಪೈ, ದಿನೇಶ ಗೌಡ, ನಾರಾಯಣ ದೇವಾಡಿಗ, ದಿನೇಶ ಶೆಟ್ಟಿ, ಮೋನಪ್ಪ ಪೂಜಾರಿ, ರಾಹುಲ್ ಕೋಟ್ಯಾನ್, ಕಿಶನ್ ಸರಪಾಡಿ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *