ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಬದನಡಿ ಕ್ಷೇತ್ರದಲ್ಲಿ ಎ.06ರಂದು ಬುಧವಾರ ಗಣಯಾಗ ಆರಂಭಿಸುವ ಮೂಲಕ ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಗಣಯಾಗ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳನ್ನು ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಬುಧವಾರ ನೆರವೇರಿಸಿದರು. ಇದೇ ವೇಳೆ ಕಾಟಿಪಳ್ಳ ಕೃಷ್ಣಾಪುರ ಕೂಟ ಮಹಾಜಗತ್ತು ಮಹಿಳಾ ಸದಸ್ಯಪರಿಂದ ಭಜನೆ, ಸಾಮೂಹಿಕ ಪ್ರಾರ್ಥನೆ, ಗೋಪೂಜೆ, ವಾಸ್ತುಹೋಮ, ಮೇಘಶ್ರೀ ಆಲಾಡಿ ತಂಡದಿAದ ಭರತನಾಟ್ಯ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಚೌಟ, ಅನುವಂಶಿಕ ಪ್ರಧಾನ ಅರ್ಚಕ ಕೆ.ಸುಂದರ ಹೊಳ್ಳ, ಅರ್ಚಕ ನಾಗೇಶ ರಾವ್, ಪ್ರಮುಖರಾದ ಡೊಂಬಯ ಅರಳ, ರಾಜೇಶ ಗೋವಿಂದಬೆಟ್ಟ, ಶರತ್ ಕುಮಾರ್, ರಶ್ಮಿತ್ ಶೆಟ್ಟಿ ಕೈತ್ರೋಡಿ, ರಾಮಸುಂದರ ಗೌಡ ಗೋಳಿತಬೆಟ್ಟು, ದಿನೇಶ ಸುವರ್ಣ, ರಾಮಚಂದ್ರ ಶೆಟ್ಟಿಗಾರ್, ಮೋಹನ್ ಕೆ.ಶ್ರೀಯಾನ್ ರಾಯಿ, ಪರಮೇಶ್ವರ ಪೂಜಾರಿ, ಹರೀಶ ಶೆಟ್ಟಿ, ಪ್ರಶಾಂತ ಶೆಟ್ಟಿ ಕೊಯಿಲ ಮತ್ತಿತರರು ಇದ್ದರು.
