ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಬಂಧನಕ್ಕೆ ನ್ಯಾಯಾಲಯದಿಂದ ವಾರಂಟ್‌ಜಾರಿ (ಆಲ್‌ಎಡಿಶನ್)
ಉಜಿರೆ: ಗುರುವಾಯಕೆರೆಯಲ್ಲಿರುವ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ಅವರನ್ನು ಬಂಧಿಸಿ ಮೂರು ತಿಂಗಳ ಅವಧಿಯ ಸೆರೆಮನೆ ವಾಸ ಶಿಕ್ಷೆ ನೀಡಬೇಕೆಂದು ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದಸ್ತಗಿರಿ ವಾರಂಟ್ ನೀಡಿದೆ.
ಪ್ರಕರಣದ ಹಿನ್ನೆಲೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಅಲ್ಲಿಂದ ನಡೆಸಲ್ಪಡುವ ಸಂಸ್ಥೆಗಳ ಬಗ್ಯೆ ಗೌರವಕ್ಕೆ ಚ್ಯುತಿ ಬರುವ ಯಾವುದೇ ರೀತಿಯ ಲಿಖಿತವಾಗಿ ಅಥವಾ ಹೇಳಿಕೆ ನೀಡಬಾರದೆಂದು ಈ ಹಿಂದೆ ಬೆಳ್ತಂಗಡಿ ನ್ಯಾಯಾಲಯವು ಮೂಲ ದಾವಾ ನಂಬ್ರ ೨೨೬/೧೩ರಲ್ಲಿ ಸೋಮನಾಥ ನಾಯಕ್ ಮತ್ತು ಇತರ ಐದು ಮಂದಿ ವಿರುದ್ಧ ಪ್ರತಿಬಂಧಕಾಜ್ಞೆ ನೀಡಿತ್ತು. ಆದರೂ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡದೆ, ಕೆ.ಸೋಮನಾಥ ನಾಯಕ್ ಸಾಮಾಜಿಕ ಜಾಲತಾಣಗಳ ಮೂಲಕ ಹೆಗ್ಗಡೆಯವರ ವಿರುದ್ಧ ನಿರಂತರ ಸುಳ್ಳು ಆರೋಪಗಳನ್ನು ಮಾಡುತ್ತಿದ್ದರು.
ಧರ್ಮಸ್ಥಳದ ಪರವಾಗಿ ಈ ವಿಚಾರವನ್ನು ಪ್ರಕರಣ ನಂಬರ್ ೩/೧೫ರಲ್ಲಿ ನ್ಯಾಯಾಲಯದ ಮುಂದೆ ಇರಿಸಿದಾಗ, ಸುದೀರ್ಘ ವಿಚಾರಣೆ ನಡೆಸಿ, ಕೆ.ಸೋಮನಾಥ ನಾಯಕ್‌ದೋಷಿ ಎಂದು ಪರಿಗಣಿಸಿದ ನ್ಯಾಯಾಲಯವು ಅವರಿಗೆ ಮೂರು ತಿಂಗಳ ಜೈಲುವಾಸದ ಸಜೆ ವಿಧಿಸಿರುವುದಲ್ಲದೆ, ಧರ್ಮಸ್ಥಳಕ್ಕೆ ನಾಲ್ಕೂವರೆ ಲಕ್ಷರೂ ಪರಿಹಾರ ನೀಡಬೇಕು.ಅಲ್ಲದೆ, ನ್ಯಾಯಾಲಯವು ಸೋಮನಾಥ ನಾಯಕ್‌ರ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಬೇಕು ಎಂದುಆದೇಶ ನೀಡಿತ್ತು.
ಈ ಆದೇಶದ ವಿರುದ್ಧ ಸೋಮನಾಥ್ ನಾಯಕ್ ಮೇಲ್ಮನವಿ (ಅಪೀಲ್) ಸಲ್ಲಿಸಿ ತನಗೆಇನ್ನೂ ಹೆಚ್ಚಿನತನಿಖೆಗೆ ಅವಕಾಶ ನೀಡಬೇಕೆಂದು ಅಪರ ನ್ಯಾಯಾಲಯಕ್ಕೆ ನಿವೇದಸಿಕೊಂಡಂತೆ, ಅವರಿಗೆ ಹೆಚ್ಚುವರಿ ಅವಕಾಶ ನೀಡುವಂತೆ, ಅಪರ ನ್ಯಾಯಾಲಯ ಪ್ರಕರಣವನ್ನು ತನಿಖಾ ನ್ಯಾಯಾಲಯಕ್ಕೆ ಮರು ರವಾನಿಸಿತ್ತು. ಮತ್ತೆ ತನಿಖಾ ನ್ಯಾಯಾಲಯವು ಹಿಂದಿನ ಆದೇಶವನ್ನೇಖಾಯಂ ಮಾಡಿರುವ ವಿರುದ್ಧ ಸೋಮನಾಥ್ ನಾಯಕ ಅಪೀಲು ಸಲ್ಲಿಸಿದಾಗ ಮತ್ತೂ ಹೆಚ್ಚಿನತನಿಖೆಗೆ ಪ್ರಕರಣವನ್ನುನ್ಯಾಯಾಲಯವು ಮರು ರವಾನಿಸಿತ್ತು.
ತನಿಖಾ ನ್ಯಾಯಾಲಯವು ಮುಂದುವರಿದತನಿಖೆ ನಡೆಸಿ, ಮೇ.08 2021ರಂದು ಅಂತಿಮ ತೀರ್ಪು ನೀಡಿತ್ತು. ಕೆ.ಸೋಮನಾಥ ನಾಯಕ್ ನ್ಯಾಯಾಲಯದಆದೇಶ ಉಲ್ಲಂಘಿಸಿ ಶಿಕ್ಷಾರ್ಹಅಪರಾಧ ಮಾಡಿರುವುದು ಸಾಬೀತಾಗಿರುವುದರಿಂದಅವರಿಗೆ ಹಿಂದೆ ನೀಡಿದ್ದ ಶಿಕ್ಷೆಯನ್ನು ವಿಧಿಸಬೇಕೆಂದು ಪುನರುಚ್ಚರಿಸಿತ್ತು.
ಈ ಆದೇಶದ ವಿರುದ್ಧ ಕೆ. ಸೋಮನಾಥ ನಾಯಕ್‌ಅಪರ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ ಬಳಿಕ ಎಮ್.ಎ. ನಂಬ್ರ :೮/೨೧ ರಲ್ಲಿ ಸುದೀರ್ಘ ವಾದ-ವಿವಾದ ನಡೆದುಅಪರ ನ್ಯಾಯಾಲಯದ ನ್ಯಾಯಾಧೀಶರಾದ ಬಿ, ಕೆ. ನಾಗೇಶ್‌ಮೂರ್ತಿಯವರು ಮಾ.22ರಂದು ಮಂಗಳವಾರ ನಾಯಕ್ ಅವರ ಮೇಲ್ಮನವಿಯಲ್ಲಿ ನಿಜಾಂಶ ಇಲ್ಲ ಎಂದು ತೀರ್ಪು ನೀಡಿ ತನಿಖಾ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದು ಅಪೀಲು ವಜಾ ಮಾಡಿದ್ದರು.
ಎರಡೂ ನ್ಯಾಯಾಲಯಗಳಲ್ಲಿ ಕೆ.ಸೋಮನಾಥ ನಾಯಕ್‌ತಪ್ಪಿತಸ್ಥರೆಂದು ಸಾಬೀತಾಗಿರುವುದರಿಂದ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಸತೀಶ, ಕೆ.ಜಿ.ಅವರು ಮಾ.31ರಂದು ಗುರುವಾರ ಆರೋಪಿ ವಿರುದ್ಧದಸ್ತಗಿರಿ ವಾರಂಟ್ ನೀಡಿ ಅವರನ್ನು ವಶಕ್ಕೆ ಪಡೆದುಕೊಂಡು ಜೈಲಿನಲ್ಲಿರಿಸಬೇಕೆಂದು ಆದೇಶ ನೀಡಿರುತ್ತಾರೆ. ಧರ್ಮಸ್ಥಳದ ಪರವಾಗಿ ಬೆಳ್ತಂಗಡಿಯ ವಕೀಲರಾದರತ್ನವರ್ಮ ಬುಣ್ಣು ಮತ್ತು ಬದರಿನಾಥ ಸಂಪಿಗೆತ್ತಾಯ ವಾದಿಸಿದ್ದರು.