ಮೂಡುಬಿದರೆ: ಆಳ್ವಾಸ್ ನುಡಿಸಿರಿ 2014ರ ಅಂಗವಾಗಿ ಮೂಡಬಿದರೆಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನವಂಬರ್ 6 ರಿಂದ 9 ರವರೆಗೆ ಆಳ್ವಾಸ್ ಚಿತ್ರಸಿರಿ 2014 ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಕಾಯರ್ಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 36 ಶ್ರೇಷ್ಠ ಸಮಕಾಲೀನ ಕಲಾವಿದರು ಭಾಗವಹಿಸಲಿದ್ದಾರೆ. ಮೂಡುಬಿದರೆ ಜೈನ ಮಠದ ಭಟ್ಟಾರಕ ಚಾರುಕೀತರ್ಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಚಿತ್ರಸಿರಿ ಉದ್ಘಾಟಿಸಲಿರುವರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕನರ್ಾಟಕ ಬ್ಯಾಂಕಿನ ಆಡಳಿತ ನಿದರ್ೆಶಕ ಪಿ. ಜಯರಾಮ ಭಟ್ ಭಾಗವಹಿಸಲಿದ್ದಾರೆ., ಗಡಿನಾಡ ಕಲಾವಿದರಾದ ಪಿ.ಎಸ್. ಪುಣಿಂಚಿತ್ತಾಯರವರಿಗೆ 2014ರ ಸಾಲಿನ `ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಶಿಬಿರದಲ್ಲಿ ಮೂರ್ತಗೊಳ್ಳುವ ಕಲಾಕೃತಿಗಳನ್ನು ನವಂಬರ್ 14 ರಿಂದ 16 ರವರೆಗೆ ನಡೆಯುವ ಆಳ್ವಾಸ್ ನುಡಿಸಿರಿಯ ಸಂದರ್ಭದಲ್ಲಿ ಪ್ರದಶರ್ಿಸಲಾಗುವುದು ಎಂದು ಆಳ್ವಾಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಚಿತ್ರಸಿರಿಯಲ್ಲಿ ಭಾಗವಹಿಸುವ ಕಲಾವಿದರು ಅಂಬರೀಶ್ ಎನ್.ಜಿ. (ಕೋಲಾರ), ಅಮೃತ್ ಎಮ್., ನಾಗರತ್ನ ಎ, ನಯನ, ನೀಲಮ್ಮ ಹೊಸಮನಿ, ಅಶೋಕ ನೆಲ್ಲಗಿ (ಗುಲಬಗರ್ಾ), ಭರತ್ ಕುಮಾರ್ ಡಿ.ಎಸ್. (ಮೈಸೂರು), ಗಣೇಶ್ ಆಚಾರ್ಯ, ಕಿರಣ್ ರಾಥೋಡ್ (ಚಿಕ್ಕಮಂಗಳೂರು), ಗ್ಯಾನಪ್ಪ ಎಂ. ಪಂಪಾಪತಿ ಕೆ. (ಕೊಪ್ಪಳ), ಹನಮಂತ್ ಪಾರಿಸ್ (ಬಿಜಾಪುರ), ಜಗನ್ನಾಥ್ ಬೆಲ್ಲದ್, ಶಿವಾನಂದ ಶ್ಯಾಗೋಟಿ (ಬೆಂಗಳೂರು), ಕೃಷ್ಣ ಕೆ.ಎಮ್., ವಿಜಯ್ ವೈ. (ಗದಗ), ಮುರಳಿ ವಿ. ಎಮ್. (ಮಂಡ್ಯ), ನಾಗರಾಜ್ ಬೆದ್ರೆ (ಚಿತ್ರದುರ್ಗ), ನಾಗರಾಜ್ ಎಮ್. (ಚಿಕ್ಕ ಬಳ್ಳಾಪುರ), ನಾಗರಾಜ್ ಪಿ., ಶಿವ ಹಾದಿಮನಿ, (ಹಾವೇರಿ), ನಾಗರಾಜ್ ಎಸ್. ಸತೀಶ್ ಎಸ್. ರಾವ್ (ಉತ್ತರ ಕನ್ನಡ), ನಾಗರಾಜು ಎಸ್.ಹೆಚ್. (ತುಮಕೂರು), ನಾಗೇಶ್ ಎನ್. (ಹಾಸನ), ಪ್ರಮೋದ್ ಕುಮಾರ್, ಶೈಲಜಾ ಜಲದಾರ್ (ರಾಯಚೂರು), ರಾಚಪ್ಪ ಎನ್. (ಚಾಮರಾಜನಗರ), ರಮೇಶ್ ಆರ್. (ಬಾಗಲಕೋಟೆ), ಸುಮತಿ (ಬೀದರ್), ಉಷಾ ಎಮ್. ಜಿ., (ದಾವಣಗೆರೆ), ಯುಸುಫಾಲಿ ಕೆ. (ಧಾರವಾಡ). ಪವನ ಬಿ. ಆಚಾರ್, ಪ್ರಸಾದ್ ರಾವ್, (ಉಡುಪಿ), ಶರತ್, ವಿಕ್ರಮ್ ಬಿ. ಶೆಟ್ಟಿ, (ದಕ್ಷಿಣ ಕನ್ನಡ)
