ಮೂಡುಬಿದರೆ: ತೋಡಾರಿನ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಪ.ಪೂ.ಕಾಲೇಜಿನ ವಿದ್ಯಾಥರ್ಿಗಳಿಗೆ ನಡೆದ `ಸ್ಮಾಶ್-2014′ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಆಳ್ವಾಸ್ ಪಿಯು ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ಉಜಿರೆ ಎಸ್ಡಿಎಂ ಪಿಯು ಕಾಲೇಜು ಬಾಲಕಿರ ವಿಭಾಗದಲ್ಲಿ ಪ್ರಥಮ, ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಶಾರದ ಪಿಯು ಕಾಲೇಜು ಬಾಲಕಿರ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿದೆ.
ಪಂದ್ಯಾಟದ ಬೆಸ್ಟ್ ಸ್ಮಾಶರ್ ಪ್ರಶಸ್ತಿಯನ್ನು ಬಾಲಕರ ವಿಭಾಗದಲ್ಲಿ ದೀಪು( ಆಳ್ವಾಸ್ ), ಬಾಲಕಿಯರ ವಿಭಾಗದಲ್ಲಿ ಮೇಘ( ಎಸ್ಡಿಎಂ) ಪಡೆದುಕೊಂಡಿದ್ದಾರೆ. ಬೆಸ್ಟ್ ಫರ್ಫಾರ್ಮರ್ ಪ್ರಶಸ್ತಿಯನ್ನು ಬಾಲಕರ ವಿಭಾಗದಲ್ಲಿ ಅಕ್ಷತಾ( ಎಸ್ಡಿಎಂ), ಬಾಲಕರ ವಿಭಾಗದಲ್ಲಿ ಸಚಿನ್( ಆಳ್ವಾಸ್) ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಮೃಣಾಲಿನಿ( ಶಾರದ ಕಾಲೇಜು), ಬಾಲಕರ ವಿಭಾಗದಲ್ಲಿ ರಾಕೇಶ್(ಎಸ್ಡಿಎಂ) ಬೆಸ್ಟ್ ಲಿಪ್ಟರ್ ಪ್ರಶಸ್ತಿ ಪಡೆದಿದ್ದಾರೆ.

mbd_nov4_9(a)

mbd_nov4_9
ಸಮಾರೋಪ ಸಮಾರಂಭದಲ್ಲಿ ಕನರ್ಾಟಕ ವಾಲಿಬಾಲ್ ತಂಡದ ಮಾಜಿ ನಾಯಕ ಸುನೀಲ್ ಬಾಳಿಗ, ಉದ್ಯಮಿಗಳಾದ ಎ.ಕೆ.ರಾವ್, ಡಿ.ಉಸ್ಮಾನ್, ಡಾ.ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ನ ಡಾ.ರಂಜಿತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ಸದಾನಂದ ಕುಮಾರ್ ಪಂದ್ಯಾಟದ ಬಗ್ಗೆ ವಿವರಿಸಿದರು. ದೈಹಿಕ ಶಿಕ್ಷಣ ಲೋಕೇಶ್ ವಂದಿಸಿದರು. ಕೀತರ್ಿಶಾಲಿನಿ, ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಉದ್ಘಾಟನೆ: ಏಕಲವ್ಯ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಕ್ರೀಡಾಪಟು ಪುಷ್ಪರಾಜ ಹೆಗ್ಡೆ ಪಂದ್ಯಾಟಕ್ಕೆ ಚಾಲನೆ ನೀಡಿದರು. ಡಾ.ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ನ ಟ್ರಸ್ಟಿ ಡಾ. ದಿವ್ಯಾಂಜಲಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ನಜೀರ್ ಶಾ, ವಿನೋದ್ ಕುಮಾರ್.ಕೆ.,ಸ್ವಾಮಿ ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ನಿದರ್ೇಶಕ ಪ್ರೇಮನಾಥ ಶೆಟ್ಟಿ ಮತ್ತು ಹೈಸ್ಕೂಲ್ ಪಿ.ಟಿ ಅಸೋಶಿಯೇಶನ್ ಅಧ್ಯಕ್ಷ ಜೋಸೆಪ್ ಪಿ.ವಿ ಉಪಸ್ಥಿತರಿದ್ದರು. ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ಸಂದೀಪ್ ಜೆ. ನಾಯಕ್ ಪಂದ್ಯಾಟದ ಬಗ್ಗೆ ವಿವರಿಸಿದರು. ಪ್ರಾದ್ಯಾಪಕ ಶಂಕರ ಉಪಾಧ್ಯಾಯ ಸ್ವಾಗತಿಸಿದರು. ವಿನೋದ್ ಕುಮಾರ್ ಆತಿಥಿಗಳನ್ನು ಪರಿಚಯಿಸಿದರು. ಸಂಸ್ಥೆಯ ಇ.ಒ.ಅಕ್ಷಯ್ ಕುಮಾರ್ ವಂದಿಸಿದರು. ಉಪನ್ಯಾಸಕಿ ಸುಪ್ರಭ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *