ವಿಟ್ಲ: ಮಹಿಳಾ ಮಂಡಳಿ ವಿಟ್ಲ ಇದರ ನೇತೃತ್ವದಲ್ಲಿ, ಶಿಶು ಅಭಿವೃದ್ಧಿ ಇಲಾಖೆ ವಿಟ್ಲ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಇದರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ವಿಟ್ಲ ವಿದ್ಯಾರ್ಥಿ ನಿಲಯದ ಸಭಾ ಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮನ್ನು ಶಿಶು ಕಲ್ಯಾಣ ಅಭಿವೃದ್ಧಿ ಅಧಿಕಾರಿ ಉಷಾ ಉದ್ಘಾಟಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಧರ್ಮಾವತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಂಚಲ ತೇಜೊಮಯ, ಪ್ರಿಯಾ ಸಖಿ ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಾದ ಮೀನಾಕ್ಷಿ ದೇವಿ, ಅರುಣಾ ನೆಟ್ಲ, ಅನ್ವಿತಾ ವಿಟ್ಲ ಚುಕ್ಕಿ ವಿಟ್ಲ ಇವರನ್ನು ಸನ್ಮಾನಿಸಲಾಯಿತು. ಚಂದ್ರಾವತಿ ಸ್ವಾಗತಿಸಿದರು, ಉಷಾ ಕೃಷ್ಣಪ್ಪ ವಂದಿಸಿದರು. ಲೀಲಾವತಿ ನಿರೂಪಿಸಿದರು.
