ಬೆಂಗಳೂರು :ಕನ್ನಡದ ಖ್ಯಾತ ನಟ ವಿ.ರವಿಚಂದ್ರನ್ ತಾಯಿ ಮತ್ತು ಕನ್ನಡದ ಹೆಸರಾಂತ ನಿರ್ಮಾಪಕ ವೀರಸ್ವಾಮಿ ಅವರ ಧರ್ಮಪತ್ನಿ ಶ್ರೀಮತಿ ಪಟ್ಟಮ್ಮಾಳ್ ವೀರಸ್ವಾಮಿ ಫೆ.28ರಂದು ಬೆಳಗ್ಗೆ 6.30ರ ಸಮಯದಲ್ಲಿ ವಿಧಿವಶರಾಗಿದ್ದಾರೆ. 83 ವರ್ಷದ ಪಟ್ಟಮ್ಮಾಳ್ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಹಲವು ವರ್ಷಗಳಿಂದ ಅಮ್ಮನ ಆರೈಕೆಯಲ್ಲಿದ್ದರು ರವಿಚಂದ್ರನ್. 
ಪಟ್ಟಮ್ಮಾಳ್ ಅವರಿಗೆ ರವಿಚಂದ್ರನ್ ಮತ್ತು ಬಾಲಾಜಿ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. ನಂತರ ರವಿಚಂದ್ರನ್ ಅವರ ಸ್ವಗೃಹದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನೆರವೇರಲಿದೆ.
