ಬಂಟ್ವಾಳ : ತಾಲ್ಲೂಕಿನ ಶಂಭೂರು ಗ್ರಾಮದ ಕೊರಜಿಪಲ್ಕೆ- ಕುಂದಾಯ ಪಂಜುರ್ಲಿ ದೈವದ ಭಂಡಾರ ಸಾನ ರಸ್ತೆಗೆ ರೂ.೧೪ ಲಕ್ಷ ವೆಚ್ಚದ ಕಾಂಕ್ರಿಟೀಕರಣ ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಂಗಳವಾರ ಚಾಲನೆ ನೀಡಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಆಧ್ಯಕ್ಷ ಆನಂದ ಶಂಭೂರು, ಪ್ರಕಾಶ್ ಮಡಿಮುಗೇರ, ಸದಾಶಿವ ಬರಿಮಾರು, ಮತ್ತಿತರರು ಇದ್ದರು.
