ಬಂಟ್ವಾಳ : ದೇಯಿ ಬೈದೆತಿ- ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 3 ರಿಂದ 7 ರವರೆಗೆ ಜರಗುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಮೆಲ್ಕಾರ್ ಬಿರ್ವ ಸೆಂಟರ್ ಸಭಾಂಗಣದಲ್ಲಿ ಬಿಡುಗಡೆ ಗೊಳಿಸಲಾಯಿತು.WhatsApp Image 2022-02-22 at 4.06.37 PMಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಯವರು ಮಾತನಾಡಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರವು ವಿಶ್ವ ಬಿಲ್ಲವರು ತಮ್ಮ ಸಮರ್ಪಣಾ ಭಾವದಿಂದ ನಿರ್ಮಿಸಿದ್ದಾರೆ ಹಾಗೂ ಇಂದು ಜಾತಿ ಮತವನ್ನು ಮೀರಿ ಲಕ್ಷಾಂತರ ದೇಯಿ ಬೈದೆತಿ ಕೋಟಿ ಚೆನ್ನಯ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಇಲ್ಲಿಯ ಕಾರ್ಣಿಕ ಶಕ್ತಿಗಳ ಆಶೀರ್ವಾದ ಪಡೆಯುತ್ತಿದ್ದಾರೆ ಎಂದರು.

ಸಭೆಯಲ್ಲಿ ಮಾರ್ಚ್ 3 ಮಧ್ಯಾಹ್ನ 12ಕ್ಕೆ ಬಿ.ಸಿ. ರೋಡ್ ಶ್ರೀ ನಾರಾಯಣ ಗುರು ಮಂದಿರ ಗಾಣದ ಪಡ್ಪು ಇಲ್ಲಿಂದ ಹೊರೆಕಾಣಿಕೆ ಗೆಜ್ಜೆಗಿರಿಗೆ ಮೆರವಣಿಗೆಯನ್ನು ನಡೆಸುವುದೆಂದು ತೀರ್ಮಾನಿಸಲಾಯಿತು. ಎಲ್ಲೆಡೆ ಗುರುದೇವರ ಹಳದಿ ಬಣ್ಣದ ಬಾವುಟ ಮತ್ತು ಹಳದಿ ಶಾಲು ಧಾರಣೆ ಮಾಡಿ ಮೆರವಣಿಗೆ ಯನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್, ಟ್ರಸ್ಟಿಗಳಾದ ಸಂಜೀವ ಪೂಜಾರಿ ಬಿರ್ವ ಸೆಂಟರ್, ಬಿಲ್ಲವ ಸಂಘದ ಮಾಜಿ ಕಾರ್ಯದರ್ಶಿಗಳಾದ ಬೇಬಿ ಕುಂದರ್ , ಭುವನೇಶ್ ಪಚ್ಚಿನಡ್ಕ, ಮಯಿಲಪ್ಪ ಸಾಲ್ಯಾನ್ ಅಧ್ಯಕ್ಷರು ಕಕ್ಯಪದವು ಗರಡಿ, ಯಶವಂತ್ ಪೂಜಾರಿ ದೇರಾಜೆ ಗುತ್ತು, ಗೆಜ್ಜೆಗಿರಿ ಜಾತ್ರೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸುಂದರ ಪೂಜಾರಿ ಬೋಳಂಗಡಿ, ಬಂಟ್ವಾಳ ಗೆಜ್ಜೆಗಿರಿ ವಲಯ ಅಧ್ಯಕ್ಷ ಪ್ರೇಮನಾಥ್ ಕೆ ಬಂಟ್ವಾಳ, ಗೆಜ್ಜೆಗಿರಿ ವಕ್ತಾರ ರಾಜೇಂದ್ರ ಚಿಲಿಂಬಿ, ಲೋಕೇಶ್ ಸುವರ್ಣ ಅಲೆತ್ತೂರು, ಪುರಸಭಾ ಸದಸ್ಯರಾದ ವಾಸು ಪೂಜಾರಿ ಲೊರೆಟೊ, ಸತೀಶ್ ಅಮರ್ ಗ್ರೂಪ್ಸ್, ನವೀನ್ ಮಂಜಿಲ, ಜಗದೀಶ್ ಕೊಯ್ಲ, ನಾರಾಯಣ ಪೂಜಾರಿ ಪಲ್ಲಿಕಂಡ, ಪ್ರಶಾಂತ್ ಪೂಜಾರಿ LIC, ಬಂಟ್ವಾಳ ಸಮಿತಿ ಕಾರ್ಯದರ್ಶಿ ವಿಜೀತ್ ಕೋಟ್ಯಾನ್, ದೇವಪ್ಪ ಕರ್ಕೇರ, ಬಿರುವೆರ್ ಕುಡ್ಲ ಬಂಟ್ವಾಳ ಘಟಕದ ಅಧ್ಯಕ್ಷರಾದ ಕಿರಣ್ ಪೂಂಜರೆ ಕೋಡಿ, ಪುರೋಷೋತ್ತಮ್ ಕಾಯರ್ ಪಲ್ಕೆ, ರಂಜಿತ್ ಪೂಜಾರಿ ಬಿಸಿ ರೋಡ್, ಸಂತೋಷ್ ಕೊಂಭರ ಬೈಲ್. ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *