ಬಂಟ್ವಾಳ: ತಾಲ್ಲೂಕಿನ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಹರ್ಷಿ ಆನಂದ ಗುರೂಜಿ ಭಾನುವಾರ ಬೆಳಿಗ್ಗೆ ಭೇಟಿ ನೀಡಿ ಆಶೀರ್ವಚನ ನೀಡಿದರು.21btl-Guruji

ನಶ್ವರವಾದ ಜೀವನದಲ್ಲಿ ತಂದೆ ಮತ್ತು ತಾಯಿ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ನಾವು ತಾಯಿಯಂತೆ ಗೌರವಿರುವ ಗೋಮಾತೆ ಮತ್ತು ಭೂ ಮಾತೆ ರಕ್ಷಣೆಗೆ ದೇಶದ ಸಂಸ್ಕೃತಿಯನ್ನು ಕೇಸರಿ ಬಣ್ಣ ಪ್ರತಿಬಿಂಬಿಸುತ್ತದೆ ಎಂದು ಮಹರ್ಷಿ ಆನಂದ ಗುರೂಜಿ ಹೇಳಿದ್ದಾರೆ.

ಇಲ್ಲಿನ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬ್ರಹ್ಮಕಲಶೋಸತ್ಸವ ಪ್ರಯುಕ್ತ ಭಾನುವಾರ ಬೆಳಿಗ್ಗೆ ಭೇಟಿ ನೀಡಿ ಅವರು ಆಶೀರ್ವಚನ ನೀಡಿದರು.

ಇದೇ ವೇಳೆ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮಾರ್ಗದರ್ಶನದಲ್ಲಿ ದೇವರಿಗೆ ದ್ರವ್ಯ ಮಿಲಿತ ಸಹಸ್ರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನೆರವೇರಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ, ಉಪಾಧ್ಯಕ್ಷ ವೇದನಾಥ ಶೆಟ್ಟಿ ಮೊಡಂಕಾಪುಗುತ್ತು, ಗೌರವ ಸಲಹೆಗಾರ ಜನಾರ್ಧನ ಸಾಲ್ಯಾನ್ ಮುಂಡಾಜೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಕೆ. ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಪ್ರಧಾನ ಕಾರ್ಯದರ್ಶಿ ಗಣೇಶ ಸುವರ್ಣ ತುಂಬೆ, ಸಂಚಾಲಕ ಟಿ.ತಾರನಾಥ ಕೊಟ್ಟಾರಿ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *