ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ೧೬೯ರ ಕುಕ್ಕುದಕಟ್ಟೆದಲ್ಲಿ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಬಸ್ ತಂಗುದಾಣಕ್ಕೆ ಪಂಚಾಯತ್ ಅಧ್ಯಕ್ಷ ಯಶವಂತ್ ಕುಮಾರ್ ಶೆಟ್ಟಿ ಅವರು ಬುಧವಾರ(ಫೆ. ೧೬) ಶಿಲಾನ್ಯಾಸ ನೆರವೇರಿಸಿದರು.gur-feb-16-bus(dilshad)  gur-feb-16-bus(hari malli)

ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಮಾತನಾಡಿ, “ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಇಲ್ಲಿದ್ದ(ಕುಕ್ಕುದಕಟ್ಟೆ) ಬಸ್ ತಂಗುದಾಣ ನೆಲಸಮಗೊಳಿಸಲಾಗಿದ್ದು, ಇಲ್ಲಿ ಶೀಘ್ರ ಹೊಸ ತಂಗುದಾಣ ನಿರ್ಮಾಣಗೊಳ್ಳಲಿದೆ. ಪಂಚಾಯತ್ ವ್ಯಾಪ್ತಿ ಪ್ರದೇಶದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬದಿಯಲ್ಲಿ, ಅಗತ್ಯವಿರುವಲ್ಲಿ ಆದ್ಯತೆ ಮೇರೆಗೆ ಪ್ರಯಾಣಿಕರ ಅನುಕೂಲಕ್ಕೋಸ್ಕರ ಬಸ್ ತಂಗುದಾಣ ನಿರ್ಮಿಸಲಾಗುವುದು” ಎಂದರು.gur-feb-16-bus(sadashiva)  gur-feb-16-bus(pdo)

ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್ ಎ, ಸದಸ್ಯರಾದ ಸದಾಶಿವ ಶೆಟ್ಟಿ ಕೆ, ಶೋಭಾ ಎ, ಸಂಪಾ, ಬಬಿತಾ, ಬಾಲಕೃಷ್ಣ ಕೋಟ್ಯಾನ್, ಎಡ್ಲಿನ್ ಕ್ಲೀಟಾ ಡಿ’ಸೋಜ, ಮರಿಯಮ್ಮ, ಅಝ್ಮೀನಾ ಹಾಗೂ ಪಿಡಿಒ ಅಬೂಬಕ್ಕರ್, ಕಾರ್ಯದರ್ಶಿ ಅಶೋಕ್, ತಾಪಂ ಮಾಜಿ ಸದಸ್ಯ ಯಶವಂತ ಆಳ್ವ, ಜಗದೀಶ ಪೂಜಾರಿ ಬಡಕರೆ, ಇರ್ಶಾದ್, ಹರಿ ಮಲ್ಲಿ, ಪುರುಷೋತ್ತಮ ಮಲ್ಲಿ, ಸ್ಟೀವನ್, ಗೋಪಾಲ, ಮೆಲ್ವಿನ್ ಸಲ್ಡಾನ, ಚಂದ್ರಹಾಸ ಕಾವ, ಶೀನ, ರುಕ್ಕಯ್ಯ, ಶೇಖರ ಕಾಮ, ಭಾಸ್ಕರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.gur-feb-16-bus(yashavanth)

By suddi9

Leave a Reply

Your email address will not be published. Required fields are marked *