ಕುಂದಾಪುರ: ಮೀನು ಲಾರಿಯೊಂದು ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಹೆಮ್ಮಾಡಿ ಸಮೀಪ ಮುವತ್ತುಮುಡಿ ಎಂಬಲ್ಲಿ ರವಿವಾರ ಮುಂಜಾನೆ ಸಂಭವಿಸಿದೆ.
meenu
ಮುವತ್ತುಮುಡಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಸ್ಥಳೀಯ ನಿವಾಸಿ ಎಲ್ಕನ್ ಒಲಿವೇರಾ (80) ಮೃತದುರ್ದೈವಿ. ಅವರು ತಲ್ಲೂರುಇಗರ್ಜಿಗೆ ಪೂಜೆಗಾಗಿ ಹೊರಟು ನಿಂತಿದ್ದರು. ಈ ವೇಳೆ ಮರವಂತೆಯಿಂದ ಕುಂದಾುರದತ್ತ ಸಾಗುತ್ತಿದ್ದ ಮೀನು ಸರಕು ಲಾರಿಯೊಂದು ತೀರಾ ಎಡಭಾಗಕ್ಕೆ ಚಲಿಸಿ ಎಲ್ಕನ? ಒಲಿವೇರಾ ಅವರಿಗೆ ಢಿಕ್ಕಿ ಹೊಡೆದಿದೆ. ತಲೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಅವರು ಮ?ತಪಟ್ಟಿದ್ದಾರೆ. ಮ?ತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಲಾರಿ ಚಾಲಕನ ವಿರುದ್ದ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

By suddi9

Leave a Reply

Your email address will not be published. Required fields are marked *