ಬಂಟ್ವಾಳ: ಇಲ್ಲಿನ ಲೊರೆಟ್ಟೋ ಮಾತಾ ಚರ್ಚ್ ನ ಅಮೃತಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ಸ್ವಚ್ಚ ಭಾರತ ಅಭಿಯಾನ ಹಾಗೂ ಶಾಂತಿ, ಪ್ರೀತಿ, ಏಕತೆಯ ನಡಿಗೆಗೆ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಚಾಲನೆ ನೀಡಿದರು.

ಚರ್ಚ್ ಆವರಣದ ಹೊರಭಾಗದಲ್ಲಿ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಎಎಸ್ಪಿ ಸ್ವಚ್ಚ ಭಾರತ ಆಂದೋಲವನ್ನು ಉದ್ಘಾಟಿಸಿ ಬಳಿಕ ಬೃಹತ್ ಪತಕೆಯನ್ನು ಬೀಸುವ ಮೂಲಕ ಶಾಂತಿ, ಪ್ರೀತಿ, ಏಕತೆಗಾಗಿ ಮಾತೆ ಮೇರಿ ಜತೆ ನಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಚರ್ಚ್ ನ ಧರ್ಮಗುರುಗಳಾದ ಫಾ. ಎಲಿಯಸ್ ಡಿಸೋಜಾ, ಚರ್ಚ್ನ ಆಡಳಿತ ಮಂಡಳಿಯ ಉಪಾಧ್ಯಕ್ಷ ರಿಚರ್ಡ್ ಮಿನೇಜಸ್, ವಾಲ್ಟರ್ ನೊರೊನ್ಹ, ಕಾರ್ಯದರ್ಶಿ ಐರಿನ್ಡಿಸೋಜಾ, ಸಿಪ್ರಿಯಾನ್ ಡಿಸೋಜಾ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸೈ ಎ.ಕೆ.ರಕ್ಷಿತ್, ಮೊದಲಾದವರು ಎಎಸ್ಪಿ ಅವರಿಗೆ ಸಾಥ್ ನೀಡಿದರು.

ನೂರಾರು ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಬಂಧುಗಳು ಕಾರ್ಯಕ್ರಮದಲ್ಲಿ ಬಾಗವಹಿಸಿ ಚರ್ಚ್ ಪರಿಸರ ಸ್ವಚ್ಚಗೊಳಸಿದರು. ಬಳಿಕ ಲೊರೆಟ್ಟೋ ಚರ್ಚ್ ನಿಂದ ಸೊರ್ನಾ ಡು ದೂರವಾಣಿ ಕೇಂದ್ರದವರೆಗೆ ಏಕತಾ ನಡಿಗೆ ನಡೆಯಿತು. ಈ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಎಸ್ಪಿ ರಾಹುಲ್ ಕುಮಾರ್ ಅವರು ಶಾಂತಿ ಬಯಸುವ ಜನರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಖುಶಿ ಕೊಟ್ಟಿದೆ. ಪ್ರೀತಿ, ಶಾಂತಿ, ಏಕತೆ ಎಲ್ಲಡೆಯೂ ನೆಲೆಸಲಿ ಎಂದು ಆಶಿಸಿದರು. ಚರ್ಚ್ ಧರ್ಮಗರು ಫಾ. ಎಲಿಯಾಸ್ ಡಿಸೋಜಾ ಪ್ರಾಸ್ತವಿಕ ಮಾತುಗಳನ್ನಾಡಿದರು.

By Suddi9

Leave a Reply

Your email address will not be published. Required fields are marked *