ಕೈಕಂಬ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ(ಸಿಇಒ) ವಾಮಂಜೂರು ತಿರುವೈಲು ಗ್ರಾಮದ ತಾರಿಗುಡ್ಡೆ ನಿವಾಸಿ ಬಿ ನಾಗರಾಜ್ ರಾವ್(೫೮) ಅವರು ಜ. ೨೭ರಂದು ಸಂಜೆ ಮನೆ ಎದುರಿರುವ ತೋಟದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.gur-jan-28-nagaraj rao

ಬ್ಯಾಂಕ್ ವ್ಯವಹಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ರಾವ್, ಕಳೆದೆರಡು ದಿನಗಳಿಂದ ಮಾನಸಿಕವಾಗಿ ವಿಚಲಿತರಾಗಿದ್ದರು. ನಿನ್ನೆ ಸಂಜೆ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ತೋಟಕ್ಕೆ ಹೋಗಿದ್ದ ಇವರು ನೇಣು ಬಿಗಿದು ಬಾವಿಗೆ ಹಾರಿದ್ದರು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅದಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ.

ಮಂಗಳೂರು ಗ್ರಾಮಾಂತರ(ಕಂಕನಾಡಿ-ವಾಮಂಜೂರು) ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇವರು ಆತ್ಮಹತ್ಯೆಗೈಯುವ ಮುಂಚೆ ಪತ್ರವೊಂದು ಬರೆದಿದ್ದರು ಎನ್ನಲಾಗಿದೆ. ಮೃತರು ಪತ್ನಿ, ಓರ್ವ ಪುತ್ರ(ಶಿಕ್ಷಕ), ಓರ್ವ ಪುತ್ರಿ ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಜ. ೨೮ರಂದು ಮಧ್ಯಾಹ್ನ ತೋಟದಲ್ಲಿ ಅಂತ್ಯಸAಸ್ಕಾರ ನಡೆಯಿತು.

By suddi9

Leave a Reply

Your email address will not be published. Required fields are marked *