ಕೈಕಂಬ : ಬ್ರಹ್ಮಶ್ರೀ ನಾರಾಯಣ ಗುರು ಅವರ ಪ್ರತಿಮೆ ಹೊಂದಿದ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಮಂಗಳೂರು ತಾಲೂಕು ಬಿಲ್ಲವ ಸಂಘದ ನಿಯೋಗವೊಂದು ಮಂಗಳವಾರ(ಜ. ೧೮) ದ.ಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಯವರಿಗೆ ಮನವಿಯೊಂದು ನೀಡಿತು.
ಮುಂಬರುವ ಗಣರಾಜ್ಯೋತ್ಸವ ಮೆರವಣಿಗಾಗಿ ರಾಷ್ಟ್ರರಾಜಧಾನಿಗೆ ಕೇರಳ ರಾಜ್ಯ ಕಳುಹಿಸಿ ಕೊಟ್ಟಿದ್ದ ತನ್ನ ನೆಲದ ಹೆಮ್ಮೆಯ ಕ್ರಾಂತಿಕಾರಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರವು ಸಾರಾಸಗಟಾಗಿ ತಿರಸ್ಕರಿಸಿದೆ. ಈ ಮೂಲಕ ಹಿಂದುಳಿದ ವರ್ಗಗಳ ಉದ್ಧಾರಕನ ಅವಮಾನಿಸಿದಂತಾಗಿದೆ ಎಂದು ಸಂಘದ ಅಧ್ಯಕ್ಷ ಜಿತೇಂದ್ರ ಜೆ ಸುವರ್ಣ ಆರೋಪಿಸಿದರು.
ಸರ್ಕಾರದ ನಿರ್ಧಾರ ಪುನರ್‌ಪರಿಶೀಲಿಸಿ, ಗಣರಾಜ್ಯೋತ್ಸದಂದು ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ಕಲ್ಪಿಸಬೇಕೆಂದು ರಾಷ್ಟ್ರಪತಿಯವರಿಗೆ ನೀಡಿದ ಮನವಿಯಲ್ಲಿ ಸಂಘ ಆಗ್ರಹಿಸಿದೆ.
ಡೀಸಿ ಡಾ. ರಾಜೇಂದ್ರ ಕೆ ವಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಸಂಘದ ಅಧ್ಯಕ್ಷ ಜಿತೇಂದ್ರ ಜೆ ಸುವರ್ಣ, ಗೌರವಾಧ್ಯಕ್ಷ ರಂಜನ್ ಮಿಜಾರು, ಕಾರ್ಯದರ್ಶಿ ಲೋಕನಾಥ ಪೂಜಾರಿ ಬಿ, ಖಜಾಂಚಿ ಪುರುಷೋತ್ತಮ ಪೂಜಾರಿ, ಪದಾಧಿಕಾರಿಗಳಾದ ಸುರೇಶ್ಚಂದ್ರ ಕೋಟ್ಯಾನ್, ಬಿ ಪಿ ದಿವಾಕರ್, ರಂಜಿತ್ ಬರ್ಕೆ, ನಾಗೇಶ್ ಕದ್ರಿ, ರಾಘವ ಕೆ ಕದ್ರಿ, ಪ್ರಜ್ವಲ್ ಮಿಜಾರು, ಸಚಿನ್ ಕದ್ರಿ, ಅವಿನಾಶ್ ಬಂಗೇರ, ಪ್ರಮೀಳಾ ಈಶ್ವರ್, ಶ್ರೀಜಾ ಇದ್ದರು.
