ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ, ಕಾಂಗ್ರೆಸ್‌ನ ಜನಪ್ರಿಯ ಯುವ ನಾಯಕ ಆರ್ ಎಸ್ ಝಾಕಿರ್ ಅವರು ಜ.17ರಂದು ಭಾನುವಾರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ಗಂಜಿಮಠ ಸೂರಲ್ಪಾಡಿಯ ಸ್ವಗೃಹದಲ್ಲಿ ನಿಧನರಾದರು.gur-jan-16-zakir

ಗಂಜಿಮಠ ಪಂಚಾಯತ್‌ಗೆ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದ ಝಾಕಿರ್, ಮೂರನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದರು. ಕಳೆದ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಲ್ಲೇ ದಾಖಲೆ ಮಟ್ಟದ ಮತ(೧೦೨೦) ಗಳಿಸಿದ್ದರು.

ಮೃತರು ಪತ್ನಿ, ಓರ್ವ ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ರಮಾನಾಥ ರೈ, ಮಾಜಿ ಎಂಎಲ್‌ಸಿ ಐವನ್ ಡಿ’ಸೋಜ, ಮಾಜಿ ಶಾಸಕ ಮೊÊದಿನ್ ಬಾವಾ, ಜಿಪಂ ಮಾಜಿ ಸದಸ್ಯ ಯು ಪಿ ಇಬ್ರಾಹಿಂ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್, ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು, ಅಬ್ದುಲ್ ಮಜೀದ್, ಗಣೇಶ್ ಪೂಜಾರಿ, ಯಶವಂತ ಕುಮಾರ್ ಶೆಟ್ಟಿ, ಸುನಿಲ್ ಗಂಜಿಮಠ, ಎ ಕೆ ಅಶ್ರಫ್ ಹಾಗೂ ಸ್ಥಳೀಯ ಮುಖಂಡರು ಸಂತಾಪ ವ್ಯಕ್ತಪಡಿಸದರು. ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಸೂರಲ್ಪಾಡಿಯ ಮಸೀದಿ ದಫನಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

By suddi9

Leave a Reply

Your email address will not be published. Required fields are marked *