ವಿಟ್ಲ ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ ಈ ವರ್ಷದಲ್ಲಿ ಎರಡನೇ ಹಂತದ ವಿದ್ಯಾರ್ಥಿ ವೇತನ ನೀಡಲಾಯಿತು. ವಿಟ್ಲದ ವಿಠಲ ವಿದ್ಯಾ ಸಂಘದ ಸುವರ್ಣ ರಂಗ ಮಂದಿದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ೧೬೯ ಮಕ್ಕಳಿಗೆ ಸುಮಾರು ೧೫ ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲ್ ಎನ್ ಕೂಡೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಬ್ರಾಯ ಪೈ, ನಾರಾಯಣ ನಾಯಕ್, ಅಲ್ಫಾನ್ಸೊ ಸಿಲ್ವೆಸ್ಟರ್ ಮಸ್ಕರೇನಸ್, ಭವಾನಿ ರೈ, ನಿತ್ಯಾನಂದ ನಾಯಕ್ ಮತ್ತು ಪದ್ಮಯ್ಯ ಗೌಡ ಭಾಗವಹಿಸಿದ್ದರು.
ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸ್ವಾಗತಿಸಿದರು. ಪ್ರಶಾಂತ ಚೊಕ್ಕಾಡಿ ವಂದಿಸಿದರು. ಚಂದ್ರಕಾoತ್ ನಿರೂಪಿಸಿದರು. ಮೋಹನ ಬಿ ಮತ್ತು ಕುಮಾರ ಸುಬ್ರಹ್ಮಣ್ಯ ಶಾಸ್ತಿç ಸಹಕರಿಸಿದು.
