ಬಂಟ್ವಾಳ: ತಾಲ್ಲೂಕಿನ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಸ್ವಾಮಿ ಭಜನಾ ಮಂದಿರದಲ್ಲಿ ಗುರುವಾರ ನಡೆದ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ವಿಗ್ರಹಕ್ಕೆ ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸ್ವತಃ ಸೀಯಾಳ ಅಭಿಷೇಕ ನೆರವೇರಿಸಿದರು.
ಇಲ್ಲಿನ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಸ್ವಾಮಿ ಭಜನಾ ಮಂದಿರದಲ್ಲಿ ಭಗವಾನ್ ಶ್ರೀ ನಿತ್ಯಾನಂದ ಸಾಮೀಜಿ ಇವರ ೩೦ನೇ ಪ್ರತಿಷ್ಠಾ ಮಹೋತ್ಸವ ಮತ್ತು ಗೋವಿಂದ ಸ್ವಾಮೀಜಿ ಅವರ ೧೩ನೇ ಪ್ರತಿಷ್ಠಾ ಮಹೋತ್ಸವ ಗುರುವಾರ ನಡೆಯಿತು. ಆರಂಭದಲ್ಲಿ ನಡೆದ ಗಣಪತಿ ಹವನ ಬಳಿಕ ಸ್ವಾಮೀಜಿದ್ವಯರ ಪಂಚಲೋಹ ವಿಗ್ರಹಕ್ಕೆ ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಹಿತ ನೂರಾರು ಮಂದಿ ಭಕ್ತರು ಸ್ವತಃ ಸೀಯಾಳಾಭಿಷೇಕ ನೆರವೇರಿಸಿದರು. ಮಧ್ಯಾಹ್ನ ಮಹಾಪೂಜೆ ಮತ್ತು ರ್ಸಾಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ರಜತ ಪಲ್ಲಕಿ ಉತ್ಸವ ಹಾಗೂ ನೇತ್ರಾವತಿ ನದಿಯಲ್ಲಿ ಅವಭೃತ ಸ್ನಾನ ನೆರೆವೇರಿತು.
ಆಡಳಿತ ಮಂಡಳಿ ಅಧ್ಯಕ್ಷ ಯೋಗೀಶ್ ಸಪಲ್ಯ, ಪ್ರಮುಖರಾದ ಗಜೇಂದ್ರ ಪ್ರಭು, ಬಿ.ದಿನೇಶ್ ಭಂಡಾರಿ, ಹರೀಶ್ ಬಂಟ್ವಾಳ, ಭೋಜ ಕುಲಾಲ್, ಗಿರಿಧರ್, ಸತೀಶ್ ಸಪಲ್ಯ, ಮೋಹನ್ ಕೆ.ಶ್ರೀಯಾನ್ ರಾಯಿ, ಉದಯ್ ಕುಮಾರ್ ಮಂಡಾಡಿ, ಶ್ರೀನಿವಾಸ ಸಪಲ್ಯ, ಸುರೇಶ್ ಬಂಟ್ವಾಳ, ಸುಲೋಚನಾ ಶ್ರೀನಿವಾಸ್ ಜಕ್ರಿಬೆಟ್ಟು, ಜಯಪ್ರಕಾಶ್ ಜಕ್ರಿಬೆಟ್ಟು, ಗೋಪಾಲಕೃಷ್ಣ ಬಡ್ಡಕಟ್ಟೆ, ಜಗನ್ನಾಥ ಕೆ.ತುಂಬೆ ಮತ್ತಿತರರು ಇದ್ದರು.
