ಬೆಂಗಳೂರು: ಫುಡ್ ಪ್ಯಾಕೆಟ್ ನೀಡಲು ತಡವಾಗಿದ್ದನ್ನು ಪ್ರಶ್ನಿಸಿದ ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ ಮೆರೆದಿರುವ ಘಟನೆ ನಗರದ ವೈಟ್ ಫೀಲ್ಡ್ ಬಳಿಯ ರೆಸ್ಟೋರೆಂಟ್ವೊಂದರಲ್ಲಿ ನಡೆದಿದೆ.
ಫುಡ್ ಡೆಲಿವರಿ ಬಾಯ್ ಸಂಜಯ್ ಫುಡ್ ಪ್ಯಾಕೆಟ್ ಪಡೆಯಲು ರೆಸ್ಟೋರೆಂಟ್ಗೆ ಬಂದಿದ್ದರು. ಈ ವೇಳೆ ಫುಡ್ ಪ್ಯಾಕೆಟ್ ನೀಡಲು ತಡವಾದ ಹಿನ್ನೆಲೆ ಗ್ರಾಹಕರಿಗೆ ತಲುಪಿಸಲು ತಡವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಮಹಿಳಾ ಸಿಬ್ಬಂದಿ ಆತನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
