ಬೆಂಗಳೂರು : ಹೆಚ್ಚುವರಿ ಅಡ್ವಕೇಟ್ ಜನರಲ್ ಎಂ ಅರುಣ್ ಶ್ಯಾಮ್, ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್ ಎ.ಜಿ ಶಿವಣ್ಣ, ಕೆ.ದಿವಾಕರ ಹಾಗೂ ಎಸ್ ಆರ್ ಅನುರಾಧಾ ಸೇರಿದಂತೆ ಒಟ್ಟು ೫೩ ವಕೀಲರಿಗೆ ಹಿರಿಯ ವಕೀಲ ಪದವಿ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಕುರಿತಂತೆ ಹೈ ಕೋರ್ಟ್ ರಿಜಿಸ್ಟರ್ ಜನರಲ್ ಟಿ.ಜಿ ಶಿವಶಂಕರೇಗೌಡ ಮಂಗಳವಾರ ಅಧಿಸೂಚನೆ ಹೊರಡಿಸಿದ್ದು, ವಕೀಲರ ಕಾಯ್ದೆ ೧೯೬೧ರ ಕಲಂ ೧೬ (೨) ಹಾಗೂ ಕರ್ನಾಟಕ ಹೈಕೋರ್ಟ್ (ಹಿರಿಯ ವಕೀಲರ ನೇಮಕ) ಆಧಿ ನಿಯಮ ೨೦೧೮ರ ನಿಯಮ ೬(೯) ರ ಅನುಸಾರ ೫೩ ವಕೀಲರಿಗೆ ಅವರ ಸೇವಾ ಅನುಭವ ಆಧರಿಸಿ ‘ಹಿರಿಯ ವಕೀಲ’ ಪದವಿ ನೀಡಲಾಗಿದೆ ಎಂದು ತಿಳಿಸಿದೆ.
ಹಿರಿಯ ವಕೀಲರ ಪಟ್ಟಿ: ಜಿ.ಪಾಪಿರೆಡ್ಡಿ, ಎಸ್.ಪಿ.ಕುಲಕರ್ಣಿ, ಪುತ್ತಿಗೆ ಆರ್. ರಮೇಶ್, ಭಟ್ ಗಣೇಶ್ ಕೃಷ್ಣ, ಎಚ್. ಕಾಂತರಾಜ್, ಎಂ.ಆರ್.ಸಿ. ರವಿ, ಎ.ಜಿ, ಶಿವಣ್ಣ, ಬಿ. ಕೆ. ಸಂಪತ್ ಕುಮಾರ್, ಎಚ್.ಎಸ್. ಚಂದ್ರಮೌಳಿ, ಸತೀಶ್ ಎಂ.ದೊಡ್ಡಮನಿ, ಬಸವರಾಜ ಪೀರಸಂಗಪ್ಪ ಸಬರದ, ಬಿ.ಸಿ ತಿರುವೆಂಗಡಮ್, ವಿಘ್ನೇಶ್ವರ ಎಸ್ ಶಾಸ್ತ್ರಿ, ಎಸ್ ಎಸ್ ಯಡ್ರಾಮಿ, ಎಮ್ ಆರ್ ರಾಜಗೋಪಾಲ್, ವಿ ಸುಧೀಶ್ ಪೈ,ಪಿ ವಿಲಾಸ್ ಕುಮಾರ್ , ಕೆ ಸುಮನ್, ಎಂ ಎಸ್ ಭಾಗವತ್, ಜಿ ಎಲ್ ವಿಶ್ವನಾಥ್, ಬಿ ಎಲ್ ಆಚಾರ್ಯ, ಪ್ರಮೋದ್ ಎನ್, ಕಠಾವಿ ಸಿ ಆರ್, ಗೋಪಾಲಸ್ವಾಮಿ ಆರ್ ಎಸ್, ಬಸವರಾಜ್ ಜಿ ವಿ, ಚಂದ್ರಶೇಖರ್, ಗಣಪತಿ ನಾರಾಯಣ ಹೆಗಡೆ, ಎನ್ ರವೀಂದ್ರನಾಥ ಕಾಮತ್, ಧನಂಜಯ ವಿಧ್ಯಾಪತಿ ಜೋಶಿ, ಬಿ ವಿ ಶಂಕರನಾರಾಯಣ ರಾವ್, ಎಸ್ ಆರ್, ಅನುರಾಧಾ, ಎಚ್.ಎನ್. ಶಶಿಧರ, ರಾಜೇಶ್ ಚಂದರ್ ಕುಮಾರ್ ರೋಹ್ರಾ, ಪದ್ಮಪ್ರಸಾದ್ ಹೆಗ್ಡೆ, ಐ. ತಾರನಾಥ್ ಪೂಜಾರಿ, ನಳಿನಾ ಮಾಯೇಗೌಡ, ಕೆ.ದಿವಾಕರ, ಡಿ.ಆರ್. ರವಿಶಂಕರ್, ಹರೀಶ್ ಬೈರಸಂದ್ರ ನರಸಪ್ಪ, ಎಸ್ ಶ್ರೀರಂಗ, ಕೆ ಎಸ್ ರವಿಶಂಕರ್, ಟಿ.ಸೂರ್ಯನಾರಾಯಣ, ಪ್ರಮೋದ್ ನಾಯರ್, ಸಿ.ಕೆ. ನಂದಕುಮಾರ್, ಅಮಿತ್ ಕುಮಾರ್ ದೇಶಪಾಂಡೆ, ಮೂರ್ತಿ ದಯಾನಂದ ನಾಯಕ್, ಎಂ.ಅರುಣ್ ಶ್ಯಾಮ್, ರೂಬೆನ್ ಜಾಕೊಬ್, ವಿ.ರಘುರಾಮನ್, ಕೆ.ಕೆ.ಚೈತನ್ಯ ವಿಕ್ರಂ ಎ. ಹುಯಿಲಗೋಳ, ಕಿರಣ್, ಎಸ್.ಜವಳಿ ಹಾಗೂ ಸುರೇಶ್ ಎಸ್ ಲೋಕ್ರೆ
