ಮೂಡುಬಿಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ, ಶ್ರದ್ಧಾ.ಎನ್.ಪೈವಳಿಕೆ ಸರ್ವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಆಳ್ವಾಸ್ ವಿದ್ಯಾರ್ಥಿ ಸಿರಿ-2014 ಸಮ್ಮೇಳನಕ್ಕೆ ಶುಕ್ರವಾರ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಗಿನ್ನೆಸ್ ದಾಖಲೆಯ ನಿರ್ಧೇಶಕ ಮಾಸ್ಟರ್ ಕಿಶಾನ್ ಸಮ್ಮೇಳನಕ್ಕೆ ಚಾಲನೆ ನೀಡುತ್ತಾ, ಸಾಹಿತ್ಯ, ಸಾಂಸ್ಕೃತಿಯ ಸೊಬಗು ನಗರ ಪ್ರದೇಶದಲ್ಲಿ ಸಿಗುತ್ತಿಲ್ಲ. ವಿದ್ಯಾರ್ಥಿ ಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ವಿದ್ಯಾರ್ಥಿ  ಸಮ್ಮೇಳನ ಸುಂದರ ವೇದಿಕೆಯನ್ನು ಕಲ್ಪಿಸುತ್ತದೆ. ವಿದ್ಯಾರ್ಥಿಗಳಲ್ಲಿ ಸಾಧನೆಯ ಕಿಚ್ಚಿದೆ.ಹೊಸತದತ್ತ ತೆರೆದುಕೊಳ್ಳುವ ಹಂಬಲವಿದೆ. ಎಳವೆಯಲ್ಲಿ ಅದಕ್ಕೆ ಸರಿಯಾದ ಪ್ರೋತ್ಸಾಹ ಮಾರ್ಗದರ್ಶನ ಸಿಗಬೇಕಾಗಿದೆ ಎಂದರು.
ಶ್ರದ್ಧಾ.ಎನ್.ಪೈವಳಿಕೆ ಆಧ್ಯಕ್ಷೀಯ ಭಾಷಣ ಮಾಡುತ್ತಾ, ಸಾಹಿತ್ಯ ಮತ್ತು ನಮ್ಮ ನಾಡಿನ ಕಲೆಗಳು ಅವುಗಳ ನೈಜ್ಯ ಸತ್ವಕ್ಕೆ ಅಭಿಮುಖವಾಗಿ ಮುನ್ನಡೆದರೆ ಇಡೀ ಭಾರತ ಮಾನವೀಯತೆಯ, ಸತ್ಯದ, ಅಹಿಂಸೆಯ ಸದಾಚಾರದ ಗಣಿಯಾದೀತು. ಕನ್ನಡ ಹಿರಿಮೆಗೆ ಶಿರೋಮಣಿಯಾಗಿ ವಿಶ್ವಕ್ಕೆ ಮಾದರಿಯಾಗುತ್ತದೆ ಎಂದರು.
Alvas Vidhyarthisiri 2014 Inugration (4)

Alvas Vidhyarthisiri 2014 Inugration (11)

Alvas Vidhyarthisiri 2014 Inugration (13)

Alvas Vidhyarthisiri 2014 Inugration (3)
ಸಮ್ಮೇಳನದ ರೂವಾರಿ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ನುಡಿಸಿರಿ, ವಿರಾಸತ್, ಮಕ್ಕಳಸಿರಿ ಬೂಟಾಟಿಕೆಯ ಸಮ್ಮೇಳನವಾಗದೆ ಮನಸ್ಸು ಕಟ್ಟು, ಸಾಹಿತಿಕ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ದೇಶಿ ಜೀವನ ಪದ್ಧತಿಯಿಂದ ವಿಮುಖರಾಗುತ್ತಿರುವ ಈ ಸನ್ನಿವೇಶದಲ್ಲಿ ನಮ್ಮ ಮೂಲ ಪರಂಪರೆ, ಸಂಸ್ಕೃತಿ ತೆರೆಗೆ ಸರಿಯುತ್ತಿದೆ. ಅವುಗಳನ್ನು ಜತನದಿಂದ ಕಾಪಾಡುವ ಮುಂದಿನ ಪೀಳಿಗೆ ಅರ್ಥಪೂರ್ಣವಾಗಿ ಹಸ್ತಾಂತರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ವಿದ್ಯಾರ್ಥಿಗಳಲ್ಲಿ ಇಂತಹ ಜಾಗೃತಿ ಮೂಡಿಸಲು ಆಳ್ವಾಸ್ ಸಂಸ್ಥೆಯು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಯಶಸ್ವಿಯಾಗಿದೆ. ಯೋಚನೆ, ಯೋಜನೆಯನ್ನು ಮೇಲ್ದರ್ಜೆಗೆ ಕೊಂಡೊಯ್ಯಲು `ವಿದ್ಯಾರ್ಥಿಸಿರಿ’ ಸಮ್ಮೇಳನ ಪೂರಕವಾಗಿದೆ. ಕಾಲ ಕಾಲಕ್ಕೆ ಚಿಂತನೆಗಳನ್ನು ಅಂಕುರಿಸದೆ. ಮೇಲ್ದರ್ಜೆಗೆ ಕೊಂಡೊಯ್ಯದೆ ವಿದ್ಯಾರ್ಥಿಗಳನ್ನು ಸಾಹಿತ್ಯದಿಂದ ದೂರ ಮಾಡುತ್ತಿದ್ದೇವೆ.
ವಿದ್ಯಾರ್ಥಿ  ಪುರಸ್ಕಾರ: ಉಡುಪಿ ವಳಕಾಡು ಸರ್ಕಾರಿ ಪ್ರೌಢಶಾಲೆ ಅಕ್ಷಯ್ ಹೆಗಡೆ, ಮೂಡುಬಿದರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಬ ಅಯಣ.ವಿ.ರಮಣ್, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಗೀತಾಲಕ್ಷ್ಮೀ.ಕೆ ಅವರಿಗೆ 2014ನೇ ಸಾಲಿನ ಆಳ್ವಾಸ್ ವಿದ್ಯಾರ್ಥಿ  ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಮಕ್ಕಳ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ,ಡಾ. ಚಿನ್ನಪ್ಪ ಗೌಡ, ಮೂಡುಬಿದಿರೆ ಕ್ಷೇತ್ರಾ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ,ಉಪಸ್ಥಿತರಿದ್ದರು.
ಪುತ್ತೂರು ವಿವೇಕಾನಂದ ಪ.ಪೂ ಕಾಲೇಜಿನ ಉಷಾ.ಎ.ಸ್ವಾಗತಿಸಿದರು. ಉಜಿರೆ ಎಸ್ಡಿಎಂ ಆಂಗ್ಲ ಮಾಧ್ಯಮ ಶಾಲೆಯ ರಶ್ಮಿ ಪಲ್ಲವಿ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಸುಶ್ಮಿತಾ.ಕೆ. ವಂದಿಸಿದರು.

By Suddi9

Leave a Reply

Your email address will not be published. Required fields are marked *