ಮೂಡುಬಿದರೆ: ತೋಡಾರಿನ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಪ.ಪೂ.ಕಾಲೇಜಿ ವಿದ್ಯಾಥರ್ಿ-ವಿದ್ಯಾಥರ್ಿನಿಯರಿಗೆ ನಡೆಯುವ `ಸ್ಮಾಶ್-2014′ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಗುರುವಾರ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.
ಏಕಲವ್ಯ ಪ್ರಶಸ್ತಿ ವಿಜೇತ, ಅಂತಾರಾಷ್ಟ್ರೀಯ ಕ್ರೀಡಾಪಟು ಪುಷ್ಪರಾಜ ಹೆಗ್ಡೆ ಪಂದ್ಯಾಟಕ್ಕೆ ಚಾಲನೆ ನೀಡಿದರು. ವಿದ್ಯಾಥರ್ಿಗಳು ಒಂದು ನಿದರ್ಿಷ್ಟವಾದ ಆಟವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡು ನೈಪುಣ್ಯತೆಯನ್ನು ಪಡೆದು ಯಶಸ್ವಿಯಾಗಬೇಕೆಂದರು. ಕ್ರೀಡಾಕ್ಷೇತ್ರದಲ್ಲಿ ಅವಕಾಶ, ಸೌಲಭ್ಯ ವಿಫುಲವಾಗಿದೆ. ಅದನ್ನು ಕ್ರೀಡಾಪಟುಗಳ ಸಮರ್ಪಕವಾಗಿ ಬಳಕೆ ಮಾಡಬೇಕು ಎಂದರು.

mbd_oct30_2 mbd_oct30_2(a)
ಡಾ.ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ನ, ಟ್ರಸ್ಟಿ ಡಾ. ದಿವ್ಯಾಂಜಲಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ನಜೀರ್ ಶಾ, ವಿನೋದ್ ಕುಮಾರ್.ಕೆ.,ಸ್ವಾಮಿ ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಕ ಪ್ರೇಮನಾಥ ಶೆಟ್ಟಿ ಮತ್ತು ಹೈಸ್ಕೂಲ್ ಪಿ.ಟಿ ಅಸೋಶಿಯೇಶನ್ ಅಧ್ಯಕ್ಷ ಜೋಸೆಪ್ ಪಿ.ವಿ ಉಪಸ್ಥಿತರಿದ್ದರು. ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ಸಂದೀಪ್ ಜೆ. ನಾಯಕ್ ಪಂದ್ಯಾಟದ ಬಗ್ಗೆ ವಿವರಿಸಿದರು. ಪ್ರಾದ್ಯಾಪಕ ಶಂಕರ ಉಪಾಧ್ಯಾಯ ಸ್ವಾಗತಿಸಿದರು. ವಿನೋದ್ ಕುಮಾರ್ ಆತಿಥಿಗಳನ್ನು ಪರಿಚಯಿಸಿದರು. ಸಂಸ್ಥೆಯ ಇ.ಒ.ಅಕ್ಷಯ್ ಕುಮಾರ್ ವಂದಿಸಿದರು. ಉಪನ್ಯಾಸಕಿ ಸುಪ್ರಭ ಕಾರ್ಯಕ್ರಮ ನಿರೂಪಿಸಿದರು.
…………………

By suddi9

Leave a Reply

Your email address will not be published. Required fields are marked *