ಮೂಡುಬಿದಿರೆ: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಜೋಡುಕರೆಯಲ್ಲಿ ನಡೆಯುವ 19ನೇ ವರ್ಷದ ಹೊನಲು ಬೆಳಕಿನ ಕಂಬಳಕ್ಕೆ ಶನಿವಾರ ಬೆಳಗ್ಗೆ ಚಾಲನೆ ನೀಡಲಾಯಿತು.WhatsApp Image 2021-12-11 at 3.21.58 PM (2)

ಕ್ರೈಸ್ತ ಧರ್ಮಗುರು ವಂ.ವಲ್ಟರ್ ಡಿಸೋಜ, ಅಲಂಗಾರು ಶ್ರೀಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಈಶ್ವರ ಭಟ್, ಪುತ್ತಿಗೆ ನೂರಾನಿ ಮಸೀದಿಯ ಧರ್ಮಗುರು ಝೀಯಾವುಲ್ಲ ಹಾಗೂ ಕುಂಟಾಡಿ ಸುಧೀರ್ ಹೆಗ್ಡೆ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ‌ ಎಂ. ಕಂಬಳವನ್ನು ಉದ್ಘಾಟಿಸಿದರು.WhatsApp Image 2021-12-11 at 3.21.58 PM (3)

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಲಾರ್ಪಣೆ ಮಾಡಿ, ಕಂಬಳ ಎನ್ನುವುದು ಕೇವಲ ಕ್ರೀಡೆಯಲ್ಲ.ಇದು ತುಳುನಾಡಿನ ಸಂಸ್ಕೃತಿ ಎಂದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೆಕಳ ಹಾಜಬ್ಬ ಹಾಗೂ ಇಂಡಿಯನ್ ಐಡಲ್ ಫೈನಲಿಸ್ಟ್ ನಿಹಾಲ್ ತಾವ್ರೋ ಅವರನ್ನು ಸನ್ಮಾನಿಸಲಾಯಿತು.WhatsApp Image 2021-12-11 at 3.21.58 PM (4)

ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ‌ ಅಧ್ಯಕ್ಷ ಕೆ.ಅಭಯಚಂದ್ರ ಜೈನ್, ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ, ಮೂಡುಬಿದಿರೆ ಕಂಬಳ ಸಮಿತಿಯ ಕೋಶಾಧಿಕಾರಿ ಭಾಸ್ಕರ್ ಎಸ್.ಕೋಟ್ಯಾನ್, ಕಂಬಳ ಬಹುಭಾಷ ಸಿನಿಮಾ ನಿರ್ದೇಶಕ ರಾಜೇಂದ್ರಬಾಬು ಸಿಂಗ್, ನಟ ಗೋಪಿನಾಥ್ , ಬಿಜೆಪಿ ಜಿಲ್ಲಾಧ್ಯಕ್ಣ ಸುದರ್ಶನ್ ಎಂ. ಮತ್ತಿತರರು ಉಪಸ್ಥಿತರಿದ್ದರು ‌WhatsApp Image 2021-12-11 at 3.21.58 PM

By suddi9

Leave a Reply

Your email address will not be published. Required fields are marked *