ಮುಂಬಯಿ : ಅಂತಃ ಶಕ್ತಿ ಬೆಳೆಸುವುದರೊಂದಿಗೆ ಆಧ್ಯಾತ್ಮಿಕ ಬೆಳವಣಿಗೆಯಾಗಬೇಕು. ಸಾಧನೆ ನಮ್ಮ ಜೀವನದ ಆಯಸ್ಸಿನ ಗುಟ್ಟು. ಸಮಾಜದಲ್ಲಿ ಧರ್ಮ, ಶಿಸ್ತು, ಶಾಂತಿ ನೆಲೆಯಬಾಗಬೇಕು. ಸ್ವಾವಲಂಬನೆಯ ಬದುಕು ರೂಪಿಸುವ ರೀತಿಯ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ. ನಿಮ್ಮಲ್ಲಿರುವ ಶಕ್ತಿ ಚೈತನ್ಯವನ್ನು ಗುರುತಿಸಿಕೊಂಡಲ್ಲಿ ನೀವು ಬೆಳೆಯಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಡಾ| ಹೆಗ್ಗಡೆ ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮದ ಅಂಗವಾಗಿ ನಿರ್ಮಾಣವಾದ ರಾಜಾಂಗಣವನ್ನು ಲೋಕಾರ್ಪಣೆಗೊಳಿಸಿ ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ ಶ್ರೀ ಗುರುದೇವಾನಂದ ಸ್ವಾಮೀಜಿಯವರನ್ನು ಗೌರವಿಸಿ ಮಾತನಾಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಧರ್ಮ ಸೂತ್ರದ ಆಡಳಿತ ಅತ್ಯಂತ ಶ್ರೇಷ್ಠವಾಗಿದೆ. ಬದುಕಿನಲ್ಲಿ ಒಳಿತನ್ನು ಸಂಪಾದನೆ ಮಾಡುವುದು ಅಗತ್ಯ. ಧರ್ಮವನ್ನು ಮರೆತ ವ್ಯಕ್ತಿಗೆ ಜೀವನವಿಲ್ಲ. ಜೀವನದಲ್ಲಿ ಕ್ರೀಯಾಶೀಲರಾಗಿರಬೇಕು. ಒಳ್ಳೆಯತನವಿದ್ದಾಗ ಮಾತ್ರ ಉತ್ತಮ ಬದುಕು ನಡೆಲು ಸಾಧ್ಯ ಎಂದರು.
ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ನಮ್ಮ ಅರಿವಿನ ಗುರುವನ್ನು ಎಚ್ಚರ ಮಾಡುವ ಕೆಲಸ ಒಡಿಯೂರಿನಿಂದ ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ತ್ಯಾಗ ಸಮರ್ಪಣಾ ಭಾವದ ಸೇವೆಯನ್ನು ನೀಡುತ್ತಾ ಬರುತ್ತಿರುವ ಕ್ಷೇತ್ರ ಇದಾಗಿದೆ. ದೇಶದಲ್ಲಿ ಬಂದಿರುವ ಆಪತ್ತಿನಿಂದ ಜನಸಾಮಾನ್ಯರು ಆತಂಕಕ್ಕೀಡು ಮಾಡಿದೆ. ಅವೆಲ್ಲವನ್ನು ಭಗವಂತ ದೂರ ಮಾಡಲಿ ಎಂದರು.
ಮAಗಳೂರು ವಿಶ್ವವಿದ್ಯಾಲಯ ಕುಲಪತಿ ಪಿ.ಎಸ್ ಯಡಪಡಿತ್ತಾಯ ಮಾತನಾಡಿ ಶ್ರೀಗಳ ಷಷ್ಠ್ಯಬ್ದ ಕಾರ್ಯಕ್ರಮ ಜನಮುಖಿ ಸಮಾಜಮುಖಿ ಸಮಾಜದ ಕಟ್ಟ ಕಡೇಯ ವ್ಯಕ್ತಿಯ ಕಣ್ಣೀರೊರೆಸುವ ಕಾರ್ಯಕ್ರಮವಾಗಿ ಮೂಡಿಬರಲಿ. ಪ್ರೀತಿ ವಿಶ್ವಾಸ ನಂಬಿಕೆಯಿಂದ ನಡೆಯುವ ಕಾರ್ಯಕ್ರಮಗಳು ಒಡಿಯೂರುನಿಂದ ನಿರಂತರವಾಗಿ ನಡೆಯುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾಡಿಚಿ ಮಾತನಾಡಿ ಧರ್ಮ ನೆಲೆಯಾಗಿರುವ ಕ್ಷೇತ್ರ ಒಡಿಯೂರು. ಇಲ್ಲಿ ನಡೆಯುವ ಕಾರ್ಯಕ್ರಮವನ್ನು ನಾವೆಲ್ಲ ಅರ್ಥೈಸಿಕೊಂಡರೆ ನಮ್ಮ ಬದುಕು ಹಸನಾಗುತ್ತದೆ. ನಿಜವಾದ ಭಕ್ತಿಯಿಂದ ನಮ್ಮ ಬದುಕು ಮುಕ್ತಿಹೊಂದಲು ಸಾಧ್ಯ ಎಂದರು.
ಒಡಿಯೂರು ಶ್ರೀಗಳು ತುಳು ಲಿಪಿಯಲ್ಲಿ ಬರೆದ ಅವದೂತೋಪನಿಷತ್ ಅನ್ನು ಧರ್ಮಾಧಿಕಾರಿ ಯವರು ಬಿಡುಗಡೆಗೊಳಿಸಿದರು. ವಿಠಲ ನಾಯಕ್ ಕಲ್ಲಡ್ಕ ಅವರ ಧ್ವನಿಯ ಒಡಿಯೂರಿನ ಸಿರಿ ಬೆಳಕು ಹರಿಕಥಾಕಾಲಕ್ಷೇಪ ಬಿಡುಗಡೆ ಮಾಡಲಾಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಅಮೃತಾನಂದಮಯಿ, ಸಂಸದ ನಳಿನ್ ಕುಮಾರ್ ಕಟೀಲು, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಶ್ರೀಗಳು ಷಷ್ಟ÷್ಯಬ್ದ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಮುಂಬಯಿ ಸಮಿತಿ ಅಧ್ಯಕ್ಷ ವಾಮಯ್ಯ ಶೆಟ್ಟಿ, ವೀವೇಕ್ ಶೆಟ್ಟಿ ನಗ್ರಿಗುತ್ತು, ಪುತ್ತೂರು ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ, ರೋಹಿತ್ ಶೆಟ್ಟಿ ನಗ್ರಿಗುತ್ತು, ವಜ್ರಮಾತಾ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಸರ್ವಾಣಿ ಪಿ.ಶೆಟ್ಟಿ, ರೇವತಿ ಎಂ. ಶೆಟ್ಟಿ ಮುಂಬಯಿ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಷಷ್ಠ್ಯಬ್ದ ಸಂಭ್ರಮ ಸಮಿತಿಯ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಸ್ವಾಗತಿಸಿದರು. ವಿ.ಬಿ.ಹಿರಣ್ಯ ಪ್ರಾಸ್ತಾವನೆಗೈದರು. ನವನೀತ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
