ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಭಾಗವಾಗಿ ನೂತನ ಧ್ವಜಸ್ತಂಭಕ್ಕೆ ಸುಳ್ಯದ ಗೂನಡ್ಕದ ಬಳಿಯ ರಾಮಚಂದ್ರ ಕಲ್ಲುಗದ್ದೆ ಅವರ ಜಮೀನಿನ ಮರ ಕಡಿಯುವುದಕ್ಕೆ ಗುರುವಾರ ಮುಹೂರ್ತ ಪೂಜೆ ನೆರವೇರಿತು.WhatsApp Image 2021-12-02 at 4.12.44 PM

ಪುರೋಹಿತರಾದ ಗಣಪತಿ ಐತಾಳ್ ಹಾಗೂ ವಿಜಯಕೃಷ್ಣ ಐತಾಳ್ ಪೂಂಜೂರು ಅವರ ವೈದಿಕ ಕಾರ್ಯದೊಂದಿಗೆ ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರ ಉಪಸ್ಥಿತಿಯಲ್ಲಿ ಪೂಜೆ ನಡೆಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ಎಸ್. ಶೆಟ್ಟಿ ಸರಪಾಡಿ ಹಾಗೂ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರು ಮಾಲಕರಿಂದ ಅನುಮತಿ ಪಡೆದರು.WhatsApp Image 2021-12-02 at 4.12.45 PM (2)

ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಅವರು ಸಹಕಾರದಿಂದ ಜೀರ್ಣೋದ್ಧಾರದ ಆರ್ಥಿಕ ಸಮಿತಿಯ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅವರ ನೇತೃತ್ವದಲ್ಲಿ ಈ ಕಾರ್ಯ ನೆರವೇರಿತು. ಬಡಗಿ ಹರೀಶ್ ಮಠದಬೆಟ್ಟು ಅವರು ಕಡಿಯುವ ಗುರುತು ಹಾಕಿದರು.WhatsApp Image 2021-12-02 at 4.12.45 PM (1)

ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಎಚ್, ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಆಡಳಿತ ಸಮಿತಿಯ ವಿಠಲ್ ಎಂ.ಆರುಮುಡಿ, ಉಮೇಶ್ ಆಳ್ವ ಕೊಟ್ಟುಂಜ, ಸುರೇಂದ್ರ ಪೈ, ಕೊರಗಪ್ಪ ಗೌಡ, ದಯಾನಂದ ಕೋಡಿ, ಪ್ರಮುಖರಾದ ಸುಂದರ ಶೆಟ್ಟಿ ಎಚ್, ರಾಧಾಕೃಷ್ಣ ರೈ ಕೊಟ್ಟುಂಜ, ಚಂದ್ರಹಾಸ ಬಲಯೂರು, ಸಂತೋಷ್ ಶೆಟ್ಟಿ ಪಿ, ನಾರಾಯಣ ದೇವಾಡಿಗ, ಪ್ರದೀಪ್ ರೈ, ಜಗದೀಶ್ ಕೋಡಿ, ಗಿರೀಶ್ ನಾಯ್ಕ್, ಅಶೋಕ್ ಪೂಜಾರಿ ಎಚ್, ಆನಂದ ಶೆಟ್ಟಿ ಆರುಮುಡಿ, ಯೋಗೀಶ್ ಎಲ್, ಯೋಗೀಶ್ ಎ, ಚೇತನ್ ಬಜ, ವಚನ್ ಬಜ, ಸುನೀಲ್ ಮೀಯಾರುಪಲ್ಕೆ, ಸುಂದರ ಬಾಚಕೆರೆ, ವಿಜೇತ್ ಶೆಟ್ಟಿ, ರಾಹುಲ್ ಕೋಟ್ಯಾನ್, ಕೀರ್ತನ್ ಭಂಡಾರಿ, ಧನ್ಯರಾಜ್ ದೇವಾಡಿಗ, ಗುರುಪ್ರಸಾದ್ ದೇವಾಡಿಗ ಪಾಲ್ಗೊಂಡಿದ್ದರು.WhatsApp Image 2021-12-02 at 4.12.45 PM

By Suddi9

Leave a Reply

Your email address will not be published. Required fields are marked *