ಬಂಟ್ವಾಳ: ಕ್ರಿಕೆಟ್ ಆಟ ಆಡಲು ಹೋಗಿರುವ ವ್ಯಕ್ತಿಯೋರ್ವರು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿ.ಮೂಡ ಗ್ರಾಮದ ತಾಳಿಪಡ್ಡು ನಿವಾಸಿ ಮಹಮ್ಮದ್ ಫಾರೂಕ್ ಕಾಣೆಯಾದ ವ್ಯಕ್ತಿ.WhatsApp Image 2021-12-01 at 11.03.28 AM

ನ.28 ರಂದು ಆದಿತ್ಯವಾರ ಬೆಳಿಗ್ಗೆ 7.30 ಗಂಟೆಗೆ ಮನೆಯಿಂದ ಕ್ರಿಕೆಟ್ ಆಟ ಆಡಿ ಬರುತ್ತೇನೆಂದು ಮನೆಯಿಂದ ಹೋದವರು ಅ ಬಳಿಕ ಮನೆಗೆ ವಾಪಸು ಬಂದಿಲ್ಲ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಅ ಬಳಿಕ ಪೋನ್ ಸ್ವಿಚ್ ಆಪ್ ಆಗಿದ್ದು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ ‌.

By Suddi9

Leave a Reply

Your email address will not be published. Required fields are marked *