ಬಂಟ್ವಾಳ : ಪಿಂಚಣಿದಾರರ ಸಂಘದ ೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಿತು. ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾದ ಚೀಫ್ ಮ್ಯಾನೇಜರ್ ಮೀರಾ ಬಿ.ಎಸ್ ಉದ್ಘಾಟಿಸಿದರು.DSC_1891

ಹಿರಿಯ ಪಿಂಣಿಣಿದಾರ ಸದಸ್ಯರುಗ ಳಾದ ಕೆ.ವಿಠಲ ಶೆಟ್ಟಿ , ಲೂಯಿಸ್ ವೆಲೇರಿಯನ್ ಸಿಕ್ವೇರಾ, ಎಸ್. ಲಲಿತಾ , ಕೆ. ನೀಲೋಜಿರಾವ್, ಕೃಷ್ಣ ಭಟ್ , ಪಿ.ಭೀಮ ಭಟ್, ಕೆ.ಪೋಂಕ್ರ , ಟಿ.ಸಂಜೀವ ಭಂಡಾರಿ , ಟಿ.ಬಿ.ದುರ್ಗಾವತಿ , ಅನಂತ ಪದ್ಮನಾಭ ಮಯ್ಯ, ಬಿ.ಎಂ.ಕಮಲಾಕ್ಷ, ಶ್ರೀ ಕೃಷ್ಣ ಭಟ್, ಶಂಕರ ನಾರಾಯಣ ರಾವ್, ಎಡ್ವಡ್ ಮಸ್ಕರೇನಸ್, ದೇವುಗೌಡ, ಪಿ.ಕುಂಙಣ್ಣರೈ, ಗೋಪಾಲಕೃಷ್ಣ ಮಾಂಬಾಡಿ, ಅನಂತರಾಮ ಹೇರಳೆ, ಟಿ.ಗೌರಮ್ಮ, ಎಂ.ಪರಮೇಶ್ವರ ಹೋಳ್ಳ, ಮಹಮ್ಮದ್ ಬಿ. , ಸುಬ್ರಹ್ಮಣ್ಯ ಭಟ್ ಮತ್ತು ನಿವೃತ್ತದೈಹಿಕ ಶಿಕ್ಷಕರಾದ ವಿ.ಶಂಕರ್, ನಿವೃತ್ತ ಮುಖ್ಯ ಶಿಕ್ಷಕಿ ಎನ್.ಬಿ.ಲಕ್ಷ್ಮೀ ಸನ್ಮಾನಿಸಲಾಯಿತು.

ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಲ/ಪಿ.ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾದ ನಿವೃತ್ತ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಸುರೇಂದ್ರನಾಥ ನಾಯಕ್ ,ಬಂಟ್ವಾಳ ತಾಲೂಕು ಕಾರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥರೈ ಮೇರಾವು, ಉಪಾಧ್ಯಕ್ಷರುಗಳಾದ ಫ್ರೊ.ತುಕಾರಾಮ ಪೂಜಾರಿ, ಮಧುಕರ ಮಲ್ಯ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ನೀಲೋಜಿರಾವ್ ಬೇಕಲ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಜಲಜಾಕ್ಞಿ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು. ಜಯರಾಮ ಪೂಜಾರಿ ವಂದಿಸಿದರು.ನಿವೃತ್ತ ಶಿಕ್ಷಕ ರಾಮಚಂದ್ರರಾವ್‌ ಕಾರ್ಯಕ್ರಮ ನಿರೂಪಿಸಿದರು. ಅಗಲಿದ ಸಂಘದ ಸದಸ್ಯರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.

By Suddi9

Leave a Reply

Your email address will not be published. Required fields are marked *