Published On: Fri, Nov 26th, 2021

ಅರಳ: ‘ಕರ್ಣಾರ್ಜುನ’ ತಾಳಮದ್ದಳೆ ಕೂಟ ಸಾಧಕರಿಗೆ ಸನ್ಮಾನ ಗೌರವ

ಬಂಟ್ವಾಳ: ತಾಲ್ಲೂಕಿನ ಅರಳ ನವಶಕ್ತಿ ಯುವಕ ಮಂಡಲ ವತಿಯಿಂದ ಭಾನುವಾರ ಏರ್ಪಡಿಸಿದ್ದ ತಾಳಮದ್ದಳೆ ಕೂಟದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.25btl-Aralaಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದಾಗ ಅವರಿಂದ ಉನ್ನತ ಸಾಧನೆ ಮೂಡಿ ಬರುತ್ತದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡೊಂಬಯ ಬಿ.ಅರಳ ಹೇಳಿದ್ದಾರೆ.

ಅರಳ ನವಶಕ್ತಿ ಯುವಕ ಮಂಡಲ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ‘ಕರ್ಣಾರ್ಜುನ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಅವರು ಸಾಧಕರನ್ನು ಪರಿಚಯಿಸಿ ಮಾತನಾಡಿದರು. ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಸ್ವರ ವಾದಕ ನಾಗೇಶ ಶೇರಿಗಾರ್ ಅರಳ ಮತ್ತು ಯಕ್ಷಗಾನ ಕಲಾವಿದ ಗಣೇಶ ರೈ ಅರಳ ಇವರನ್ನು ಸನ್ಮಾನಿಸಲಾಯಿತು.

ಹಿರಿಯ ಕಲಾವಿದ ದಿನೇಶ ಶೆಟ್ಟಿ ಕಾವಳಕಟ್ಟೆ, ಯಕ್ಷಗುರು ಗಣೇಶ ಶರ್ಮ, ಸಂಘದ ಮಾಜಿ ಅಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ, ಅಧ್ಯಕ್ಷ ಶಿವರಾಮ ಸಂಗಬೆಟ್ಟು, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಸತೀಶ ಡಿಕೋಸ್ತ, ಪ್ರಮುಖರಾದ ರಂಜನ್ ಕುಮಾರ್ ಶೆಟ್ಟಿ, ಉಮೇಶ ಡಿ.ಎಂ., ಮಂಜಪ್ಪ ಅರಳ ಮತ್ತಿತರರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter