Published On: Thu, Nov 25th, 2021

ಗುರುಪುರ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆಗೈಯಲು ಯತ್ನಿಸಿದ ನಾರಾಯಣ ಕೋಟ್ಯಾನ್

ಕೈಕಂಬ: ಗುರುಪುರ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆಗೈಯಲು ಯತ್ನಿಸಿದ ವ್ಯಕ್ತಿಯೊಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.gur-nov-25-narayan kotian

ಕದ್ರಿಯಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿರುವ ನಾರಾಯಣ ಕೋಟ್ಯಾನ್ ಮತ್ತು ಶಕ್ತಿನಗರದ ರಿಕ್ಷಾ ಚಾಲಕ ಜಗದೀಶ್ ಯಾನೆ ಜಗ್ಗು ಮಧ್ಯೆ ಬುಧವಾರ ಜಗಳವಾಗಿದ್ದು, ಕೋಟ್ಯಾನ್‌ಗೆ ಜಗ್ಗು ಹೊಡೆದಿದ್ದು. ತಲೆಗೆ ಬಲವಾದ ಗಾಯವಾಗಿದೆ. ಘಟನೆ ಬಗ್ಗೆ ಕದ್ರಿ ಠಾಣೆಯಲ್ಲಿ ದೂರಿಕೊಂಡಿದ್ದರೂ, ಪೊಲೀಸರು ತನ್ನ ವಿರುದ್ಧವೇ ದೂರು ದಾಖಲಿಸಿಕೊಂಡಿದ್ದಾರೆ ಎಂದು ಕೋಟ್ಯಾನ್ ಹೇಳಿಕೊಂಡಿದ್ದಾರೆ.

ಆರೋಪಿ ಜಗ್ಗುವನ್ನು ಠಾಣೆಗೆ ಕರೆಸಿಕೊಳ್ಳುವಲ್ಲಿ ವಿಫಲವಾಗಿರುವ ಪೊಲೀಸರು ನನ್ನ ವಿರುದ್ಧವೇ ದೂರು ದಾಖಲಿಸಿಕೊಂಡಿದ್ದಾರೆ. ಜೈಲಿಗೆ ಹೋಗುವ ಬದಲಿಗೆ ಸಾಯುವುದೇ ಲೇಸೆಂದು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದೆ” ಎಂದು ಕೋಟ್ಯಾನ್ ಹೇಳಿದ್ದಾರೆ.

ಸಂಘ-ಪರಿವಾರದೊAದಿಗೆ ನಂಟು ಹೊಂದಿರುವ ಇವರು ತನಗಾದ ಅನ್ಯಾಯದ ಬಗ್ಗೆ ಹಿಂದೂ ಮುಖಂಡ ಶರಣ್ ಪಂಪ್ವೆಲ್ ಅವರಲ್ಲಿ ದೂರಿಕೊಂಡಿದ್ದಾರೆ. ಗುರುಪುರದ ಹಿಂದೂ ಮುಖಂಡರು ಇವರನ್ನು ಬಜ್ಪೆ ಪೊಲೀಸರ ಸುಪರ್ದಿಗೊಪ್ಪಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter