Published On: Tue, Nov 23rd, 2021

ಕೈಕಂಬದಲ್ಲಿ ಸಿಪಿಐಎಂನ ೨೩ನೇ ದ.ಕ ಜಿಲ್ಲಾ ಸಮ್ಮೇಳನದ ಸಭೆ

ಕೈಕಂಬ : ಕಮ್ಯುನಿಸ್ಟ್ ಪಕ್ಷ ಈ ದೇಶದ ದುಡಿಯುವ ವರ್ಗದ ಮೇಲಿನ ದೌರ್ಜನ್ಯ ವಿರೋಧಿಸಿ ನಿರತಂತರ ಹೋರಾಟ ಮಾಡುತ್ತ ಬಂದಿರುವ ಪಕ್ಷ. ರಷ್ಯಾದಲ್ಲಿ ಹೋರಾಟದ ಕಿಚ್ಚು ಹಚ್ಚಿದ ಕಮ್ಯುನಿಸ್ಟರು ಅಮೆರಿಕ, ಭಾರತ ಮತ್ತಿತರ ರಾಷ್ಟçಗಳಲ್ಲಿ ಸಾಮ್ರಾಜ್ಯಶಾಹಿಗಳು ಮತ್ತು ಬಂಡವಾಳಶಾಹಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಎಡಪಕ್ಷ ಮಾನವೀಯತೆ ವಿರೋಧಿ ಹೋರಾಟದ ಪಕ್ಷ. ಕೆಂಬಾವುಟ ವಿಮೋಚನೆಯ ಸಂಕೇತ ಎಂದು ಕೇರಳ ರಾಜ್ಯದ ಮಾಜಿ ಆರೋಗ್ಯ ಸಚಿವೆ, ಹಾಲಿ ಶಾಸಕಿ ಕಾಂಮ್ರೇಡ್ ಶೈಲಜಾ ಟೀಚರ್ ಹೇಳಿದರು.23vpcpim

ಗುರುಪುರ ಕೈಕಂಬದಲ್ಲಿ ನಡೆದ ೨೩ನೇ ದಕ್ಷಿಣ ಕನ್ನಡ ಜಿಲ್ಲಾ ಸಿಪಿಐಎಂ ಸಮ್ಮೇಳದ ಎರಡನೇ ದಿನವಾದ ಮಂಗಳವಾರ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.23vp cpim

ಕೃಷಿ ಕಾಯ್ದೆ ತಿದ್ದುಪಡಿ ಮೂಲಕ ಮೋದಿ ಸರ್ಕಾರ ಕಾರ್ಪೊರೆಟ್ ಸಂಸ್ಥೆಗಳ ಶ್ರೀಮಂತರಿಗೆ ನೆರವು ನೀಡಲು ಪ್ರಯತ್ನಿಸಿದ್ದು, ರೈತರ ಸುದೀರ್ಘ ಹೋರಾಟ ಫಲವಾಗಿ ಅವರ ದುರಾಲೋಚನೆಗಳಿಗೆ ಕಲ್ಲ ಬಿದ್ದಂತಾಗಿದೆ. ಆರೆಸ್ಸೆಸ್, ವಿಹಿಂಪ, ಬಜರಂಗ ದಳ ಮೊದಲಾದ ಹಿಂದೂ ಪರ ಸಂಘಟನೆಗಳು ಕಾರ್ಮಿಕ ವರ್ಗ, ದಲಿತರು, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು, ರೈತರು, ದುಡಿಯುವ ವರ್ಗದ ಜನರ ಮಧ್ಯೆ ಬಿರುಕು ಹುಟ್ಟಿಸುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಅಂತಿಮವಾಗಿ ಈ ಎಲ್ಲ ಸಂಘಟನೆಗಳ ಪ್ರಯತ್ನ ಮೋದಿ ಮೂಲಕ ಕಾರ್ಪೊರೆಟ್ ಸಂಸ್ಥೆಗಳ ಮಾಲಕರಿಗೆ ಸಂದಾಯವಾಗುತ್ತಿದೆ. ಕೇರಳದಲ್ಲಿ ಇಂತಹ ಸಂಘಟನೆಗಳ ಪ್ರಯತ್ನಕ್ಕೆ ಯಾರೂ ಸೊಪ್ಪು ಹಾಕಿಲ್ಲ. ಕರ್ನಾಟಕದಲ್ಲೂ ಅಂತಹ ಸ್ಥಿತಿ ನಿರ್ಮಾಣವಾಗಬೇಕು ಎಂದು ಕಾಂಮ್ರೇಡ್ ಶೈಲಜಾ ಟೀಚರ್ ಗುಡುಗಿದರು.23-2

ತುಳುನಾಡಿದ ಸಂಸ್ಕೃತಿಯAತೆ ಶೈಲಜಾ ಟೀಚರನ್ನು ತಲೆಗೆ ಮುಟ್ಟಾಳೆ ಇಟ್ಟು, ಫಲಕ ಕೊಟ್ಟು ಗೌರವಿಸಲಾಯಿತು. ಪೊಳಲಿ ದ್ವಾರದ ಬಳಿಯಿಂದ ಸಮ್ಮೇಳನ ವೇದಿಕೆಯವರೆಗೆ ಚೆಂಡೆ, ತಾಲೀಮು, ಹುಲಿವೇಷ ಕುಣಿತ, ಯಕ್ಷಗಾನ ವೇಷಗಳನ್ನೊಳಗೊಂಡ ಕಾರ್ಮಿಕರ ಬೃಹತ್ ಮೆರವಣಿಗೆ ಸಾಗಿತು.23-1

ಸಮ್ಮೇಳದ ಸ್ವಾಗತ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿದರು ಪಕ್ಷದ ಜಿಲ್ಲಾ ಮುಖಂಡ ವಸಂತ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐಎಂ ಪಕ್ಷದ ಮುಖಂಡರಾದ ಕೆ ಎಸ್ ಶ್ರೀಯಾನ್, ಯು ಬಿ ಲೋಕಯ್ಯ, ಯಾದವ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಸದಾಶಿವ ದಾಸ್, ಪದ್ಮಾವತಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ವಾಸುದೇವ ಉಚ್ಚಿಲ್, ಮನೋಜ್ ವಾಮಂಜೂರು ಹಾಗೂ ಪಕ್ಷದ ಪದಾಧಿಕಾರಿಗಳು, ನೂರಾರು ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter