Published On: Mon, Nov 22nd, 2021

ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿಗೆ ಕೊಲೆ  ಬೆದರಿಕೆ. ಸ್ಪಷ್ಟೀಕರಣ ನೀಡಿದ ಹರೀಶ್ ಮಟ್ಟಿ

ಕೈಕಂಬ: ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ   ಹರೀಶ್ ಮಟ್ಟಿಯವರಿಗೆ   ಫೇಸ್ಬುಕ್ ಖಾತೆಯಲ್ಲಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ  ಕೊಲೆ ಬೆದರಿಕೆ ಒಡ್ಡಿದ ಘಟನೆ ಈ ರೀತಿ ಇದೆ.  “ಮಿಸ್ಟರ್ ಹರೀಶ್ ಅವರೇ ನೀವ್ ಮಂಗಳೂರಲ್ಲಿ ಎದ್ದರೆ  ನಮಗೆ ಮಲಗ್ಲಿಸ್ಲಿಕ್ಕೆ ಗೊತ್ತು ಸುಮ್ಮನೆ ಆಗದ ವಿಷಯ ಎಲ್ಲಾ ಮಾತಾಡಬೇಡಿ” ಎಂದು ಬರೆಯಲಾಗಿದೆ.harish matti

ನಮ್ಮ ಕುಡ್ಲ  ಟಿವಿ ಚಾನಲ್ ಒಂದರಲ್ಲಿ ನಡೆದ ಕೋಡಿಕಲ್ ನಾಗಬನ ದ್ವ0ಸ ಕುರಿತ  ಡಿಬೇಟ್ ಕಾರ್ಯಕ್ರಮದಲ್ಲಿ  ಬಿಜೆಪಿ ಮುಖಂಡ ಜಗದೀಶ್ ಶೇಣವ, ಹಿಂದೂ ಮಹಾಸಭಾದ ಧರ್ಮೇದ್ರ ಅವರುಗಳ ಜತೆ ಹರೀಶ್ ಮಟ್ಟಿ ಕೂಡ  ಭಾಗವಹಿಸಿದ್ದರು. ಈ ವೇಳೆ    ಚಾನೆಲ್ ಗೆ ಕರೆಮಾಡಿದ್ದ ಇಮ್ರಾನ್  ಡಿಬೇಟ್ ನಲ್ಲಿ ಭಾಗವಹಿಸುವ ಯೋಗ್ಯತೆ ಮೂವರಿಗೂ ಇಲ್ಲ ಅವರನ್ನು ಕಳುಹಿಸಿ ಹಿಂದೂಗಳಲ್ಲೇ ಒಗ್ಗಟ್ಟಿಲ್ಲ ಮೊದಲು ನೀವ್ ಒಗ್ಗಟ್ಟಾಗಿ ಎಂಬಿತ್ಯಾದಿಯಾಗಿ ಹೇಳಿದ್ದು ಇದಕ್ಕೆ ಹರೀಶ್ ಅವರು ನಮ್ಮ ವಿಷಯ ನಿನಗೆ ಬೇಡ ನಮ್ಮ ಧಾರ್ಮಿಕ ಕ್ಷೆತ್ರಗಳ ಅಪವಿತ್ರ, ಹಿಂದೂ ದೇವರುಗಳ ಅವಮಾನ ಮತ್ತು ಲವ್ ಜಿಹಾದ್ ಘಟನೆಗಳು ನಡೆದರೆ ಸುಮ್ಮನಿರುವುದಿಲ್ಲ ಹಿಂದೂ ಗಳೆಲ್ಲರೂ ಒಂದಾಗಿ ಪ್ರತ್ಯುತ್ತರ ನೀಡುತ್ತೇವೆ ಎಂದು   ಖಾರವಾಗಿಯೇ ಉತ್ತರಿಸಿದ್ದರು.

ಇದಾಗಿ ಒಂದು ವಾರದ ನಂತರ ಇತ್ತೀಚೇಗೆ ಕ್ರಿಯೇಟ್ ಆದ ವಿರಾಟ್ ಇಂಡಿಯಾ  ಫೇಸ್ಬುಕ್ ಪುಟದಲ್ಲಿ ಕೊಲೆ ಮಾಡುವ ದಾಟಿಯಲ್ಲಿ ಬರೆದಿರುವುದು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ. ಈ ಕುರಿತಂತೆ ಹರೀಶ್ ಮಟ್ಟಿ ಅವರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಹಿಂದೂ ಸಂಘಟನೆಗಳ ಕಾರ್ಯಕರ್ತರು ತಾಳ್ಮೆಕಳೆದುಕೊಳ್ಳದೆ   ಯಾವುದೇ ಪ್ರಚೋದನೆಗೆ ಒಳಗಾಗಬೇಡಿ  ಎಂದು ಹರೀಶ್ ಮಟ್ಟಿ ವಿನಂತಿಸಿದ್ದಾರೆ.

ಈ ಬಗ್ಗೆ  ಪೊಲೀಸ್ ಇಲಾಖೆ ಗಮನಹರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter