Published On: Mon, Nov 22nd, 2021

ಮೂಡುಬಿದಿರೆ ಯುವಬಂಟರ ಸಂಘದ ಪದಗ್ರಹಣ, ಕೆಸರ್‍ಡೊಂಜಿ ಬಂಟ ಕೂಟ

ಮೂಡುಬಿದಿರೆ: ಯುವ ಬಂಟರ ಸಂಘ ಮೂಡುಬಿದಿರೆ ಪದಗ್ರಹಣ ಸಮಾರಂಭ ಮತ್ತು ಕೆಸರ್‍ಡೊಂಜಿ ಬಂಟ ಕೂಟ ನಾಗರಕಟ್ಟೆ ಬಾಕಿಮಾರು ಗದ್ದೆಯಲ್ಲಿ ಭಾನುವಾರ ನಡೆಯಿತು.WhatsApp Image 2021-11-22 at 8.51.04 AM

ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಣ, ಆರೋಗ್ಯ, ವಿವಾಹ ವಿಷಯಗಳಲ್ಲಿ ಯುವಜನತೆಗೆ ಸಹಾಯ, ಸಹಕಾರ, ಮಾರ್ಗದರ್ಶನ ನೀಡುವ, 12 ಗ್ರಾಮ ಸಮಿತಿಗಳನ್ನು ಬಲಪಡಿಸುವ ಕಾರ್ಯ ನಡೆಯಲಿ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ ಶೆಟ್ಟಿ ಐಕಳ ಅವರು ಮಾತನಾಡಿ, ಬಂಟರು ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಬೆಂಬಲ ನೀಡಿ. ಯಾವುದೇ ಸಂಕಷ್ಟ ಬಂದಾಗಲೂ ಆತ್ಮಹತ್ಯೆಗೆ ಮನಮಾಡದಿರಿ, ಬಂಟರ ಸಂಘಟನೆಗಳ ಗಮನಕ್ಕೆ ತನ್ನಿ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಉದ್ಯಮಿ ಮುನಿಯಾಲು ಉದಯಕುಮಾರ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ದಿವಾಕರ ಶೆಟ್ಟಿ ತೋಡಾರು, ಕೆ.ಪಿ. ಸುಚರಿತ ಶೆಟ್ಟಿ, ಕ್ರೀಡಾಪಟು, ಚಿತ್ರನಟ ರೋಹಿತ್ ಕುಮಾರ್ ಕಟೀಲು, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷಕ್ಷ ಸುಧಾಕರ್ ಎಸ್. ಪೂಂಜ ಮುಖ್ಯ ಅತಿಥಿಗಳಾಗಿದ್ದರು.

ಬೆಂಗಳೂರು ಬಂಟರ ಸಂಘದ ಮೂಲ್ಕಿ ಸುಂದರರಾಮ್ ಶೆಟ್ಟಿ ಪ್ರಶಸ್ತಿ ಪುರಸ್ಕøತ ಐಕಳ ಹರೀಶ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋಹಿತ್ ಕುಮಾರ್ ಕಟೀಲು, ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಕುಮಾರ್ ಹೆಗ್ಡೆ, ಕೃಷಿರಂಗದ ಸಾಧಕ ಅಂಬೂರಿ ನಾಗರಾಜ ಶೆಟ್ಟಿ ಬೆಳುವಾಯಿ, ಪಿಎಚ್.ಡಿ. ಪಡೆದ ಪ್ರಾಧ್ಯಾಪಕ ಮಧ್ವರಾಜ ಶೆಟ್ಟಿ ಬೆಳುವಾಯಿ ಅವರನ್ನು ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ 6 ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಯುವ ಬಂಟರ ಸಂಘದ ಅಧ್ಯಕ್ಷ ಜಯಕುಮಾರ ಶೆಟ್ಟಿ ಸ್ವಾಗತಿಸಿದರು.

ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸಂದೀಪ್ ಶೆಟ್ಟಿ ತೋಡಾರು ವಂದಿಸಿದರು.
ಬಾಕಿಮಾರು ಗದ್ದೆಯಲ್ಲಿ ಗ್ರಾಮೀಣ ಹಾಗೂ ಮನರಂಜನಾ ಆಟೋಟ ಸ್ಪರ್ಧೆಗಳು ನಡೆಯಿತು. 12 ಗ್ರಾಮ ಸಮಿತಿಗಳ ಸುಮಾರು 700 ಯುವ ಕ್ರೀಡಾಳುಗಳ ಸಹಿತ 1,500ರಷ್ಟು ಮಂದಿ ಸಮಾಜಬಾಂಧವರು ಭಾಗವಹಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter