ಮೂಡುಬಿದಿರೆ : ಯನೆಪೋಯ ಸಂಸ್ಥೆಯು ನೀಡುವ ಪ್ರತಿಷ್ಠಿತ ಯನೆಪೋಯ ಶಿಕ್ಷಕ 2021 ಪ್ರಶಸ್ತಿಯನ್ನು ಮೂಡುಬಿದಿರೆ ಅಳಿಯೂರಿನ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸುಬ್ರಹ್ಮಣ್ಯ ಆಚಾರ್ ಆವರಿಗೆ ನೀಡಿ ಗೌರವಿಸಲಾಯಿತು.
ಅವರು ವಿಜ್ಞಾನ ರಾಜ್ಯ ಸಂಪನ್ಮೂಲ ವ್ಯಕ್ತಿ ಗಳಾಗಿದ್ದು . ಶಿಕ್ಷಕರ ವಿಷಯ ಸಂಪದೀಕರಣ, ವಿಜ್ಞಾನ ವಸ್ತು ಪ್ರದರ್ಶನ , ಪರಿಸರ ಸಂರಕ್ಷಣೆಯ ಉಪನ್ಯಾಸ ಗಳನ್ನು ಕಳೆದ ಎರಡು ದಶಕಗಳಿಂದ ಮಾಡುತ್ತಾ ವಿಜ್ಞಾನ ಶಿಕ್ಷಕರಾಗಿ ತಮ್ಮ ಶಾಲೆಯಲ್ಲಿ ಆಕರ್ಷಕ ಪ್ರಯೋಗಾಲಯ ರಚಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಯೆನೆಪೋಯ ಸಂಸ್ಥೆಯ ಕುಲಪತಿ ಡಾ. ಮಹಮ್ಮದ್ ಕುನ್ಹಿ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
