ವಿಟ್ಲ: ಇತ್ತೀಚೆಗೆ ಬೆಂಕಿ ಅವಘಡದಿಂದ ಸಂಪೂರ್ಣ ಸುಟ್ಟುಹೋದ ವಿಟ್ಲ ಚಂದಳಿಕೆಯ ಹರೀಶ್ ಮಾಲಕತ್ವದ ಆಶೀರ್ವಾದ ಮೋಟಾರ್ ವರ್ಕ್ಸ್ ನೂತನ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯದ ಅಧ್ಯಕ್ಷ ಬಾಬು ಬಿ ಕೆ, ದಿನೇಶ್ ಕುಮಾರ್, ಜನಾರ್ಧನ ಅತ್ತಾವರ, ಸಂಜೀವ ಪೂಜಾರಿ, ಪುರುಷೋತ್ತಮ ಕಮಿಲ, ಚಂದ್ರಶೇಖರ ಭಟ್ ಪಡಾರು, ಸುಂದರ ಆಚಾರ್ಯ ನೆಗಳಗುಳಿ, ರಾಜಶೇಖರ ಆಚಾರ್ಯ ಮತ್ತು ನವೀನ್ ಕುಲಾಲ್ ಪುತ್ತೂರು ಉಪಸ್ಥಿತರಿದ್ದರು.
